ಬೆಳ್ಳಾರೆ: ಸಾವಿರ ರೂ. ಮತ್ತು ಊರ ಕೋಳಿಯ ಪ್ರಕರಣ ➤ ಸುಳ್ಳು ಸುದ್ದಿ ಹರಡಿದ ಮೂವರ ವಿರುದ್ಧ ಕೇಸ್

(ನ್ಯೂಸ್ ಕಡಬ) newskadaba.com ಬೆಳ್ಳಾರೆ, ಎ.20. ಲಾಕ್‌ಡೌನ್ ಉಲ್ಲಂಘಿಸಿ ಆಗಮಿಸಿದ್ದ ಕಾರನ್ನು ವಶಪಡಿಸಿ ದಂಡ ಹಾಕಿದ್ದ ಬೆಳ್ಳಾರೆ ಪೊಲೀಸರ ವಿರುದ್ಧ ದಂಡ ಹಾಕಿದ್ದಲ್ಲದೆ ಊರ ಕೋಳಿ ಕೇಳಿದ್ದಾರೆ ಎಂದು ಖಾಸಗಿ ಮಾಧ್ಯಮವೊಂದಕ್ಕೆ ಸುಳ್ಳು ಸುದ್ದಿ ನೀಡಿದ ಕಾರಣಕ್ಕೆ ಮೂವರು ಆರೋಪಿಗಳ ಮೇಲೆ ಸೋಮವಾರದಂದು ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪೊಲೀಸರ ನೈತಿಕ ಸ್ಥೈರ್ಯವನ್ನು ಕುಗ್ಗಿಸುವ ಸುಳ್ಳು ಆರೋಪಗಳನ್ನು ಹೊರಿಸಿ ಪೊಲೀಸರು ಹಾಗೂ ಸಾರ್ವಜನಿಕರ ಮಧ್ಯೆ ವೈಮನಸ್ಸು ಉಂಟುಮಾಡಿ ಸಮಾಜದಲ್ಲಿ ಅಶಾಂತಿಯನ್ನು ಸೃಷ್ಟಿಸಲು ಪ್ರಯತ್ನಿಸಿದ್ದಾರೆಂದು ಆರೋಪಿಸಿ ಸುಂದರ ಕಾಪುತ್ತಡ್ಕ, ಪ್ರದೀಪ್ ಮತ್ತು ಕುಮ್ಮಕ್ಕು ನೀಡಿದ ಆರೋಪದಲ್ಲಿ ಪ್ರಶಾಂತ ರೈ ಮರುವಂಜ ಎಂಬವರ ವಿರುದ್ಧ ಬೆಳ್ಳಾರೆ ಪೊಲೀಸರು ಸೋಮವಾರದಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Also Read  ಮಂಗಳೂರು ವಿವಿಯ ಆಡಳಿತದ ವಿರುದ್ಧ ವಿದ್ಯಾರ್ಥಿಗಳಿಂದ ಬೃಹತ್ ಪ್ರತಿಭಟನೆ

error: Content is protected !!
Scroll to Top