ಅಪಘಾತವನ್ನು ಆಹ್ವಾನಿಸುತ್ತಿರುವ ರಾಷ್ಟ್ರೀಯ ಹೆದ್ದಾರಿಯ ಹೊಂಡಗಳು ► ಪಾದಚಾರಿಗಳ, ವಾಹನ ಚಾಲಕರ ಸಮಸ್ಯೆಯನ್ನು ಕೇಳುವವರು ಯಾರು..?

(ನ್ಯೂಸ್ ಕಡಬ) newskadaba.com ಮಾಣಿ, ಆ.31. ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಮಾಣಿಯಿಂದ ಕಲ್ಲಡ್ಕವರೆಗಿನ ಹಳೀರ, ಸೂರಿಕುಮೇರು, ಕುದ್ರೆಬೆಟ್ಟು ಎಂಬಲ್ಲಿ ಅಪಾಯಕಾರಿ ಹೊಂಡಗಳು ತಲೆ ಎತ್ತಿದ್ದು ಹಲವಾರು ಅಪಘಾತಗಳಿಗೆ ಕಾರಣವಾಗುತ್ತಿದೆ.

ಮಳೆಗಾಲದಲ್ಲಿ ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದೆ ಮಳೆಯ ನೀರೆಲ್ಲಾ ರಸ್ತೆಗಳಲ್ಲೇ ಹೋಗುತ್ತಿರುವುದರಿಂದ ವಾಹನ ಚಾಲಕರಿಗೆ ರಸ್ತೆಯು ಸರಿಯಾಗಿ ಗೋಚರಿಸದೆ ಇಂತಹಾ ಹೊಂಡಗಳಿಗೆ ಬಿದ್ದು ಹಾಗೂ ಕೆಲವೊಂದು ಹೊಂಡಗಳು ಹತ್ತಿರ ತಲುಪಿದ ನಂತರ ಗೋಚರಿಸುವುದರಿಂದ ಕೂಡಲೇ ಬ್ರೇಕ್ ಹಾಕಿದಾಗ ಹಿಂದಿನಿಂದ ಬರುವ ವಾಹನಗಳು ಡಿಕ್ಕಿಯಾಗಿ ಹಲವಾರು ಅಪಘಾತಗಳು ಸಂಭವಿಸಿವೆ. ಅದೂ ಅಲ್ಲದೆ ರಾಷ್ಟ್ರೀಯ ಹೆದ್ದಾರಿ ಚತುಷ್ಫಥ ಕಾಮಗಾರಿಗಾಗಿ ಅಲ್ಲಲ್ಲಿ ಮರಗಳನ್ನು ಕಡಿದು ರಸ್ತೆಯ ಇಕ್ಕೆಲಗಳಲ್ಲಿ ಮರದ ಕೊಂಬೆಗಳನ್ನು ಹಾಕಿರುವುದರಿಂದ ಶಾಲಾ ಮಕ್ಕಳಿಗೆ ಹಾಗೂ ಪಾದಚಾರಿಗಳಿಗೆ ನಡೆದಾಡಲು ಕಷ್ಟವಾಗುತ್ತಿದ್ದು ಪ್ರಾಣ ಕೈಯಲ್ಲಿ ಹಿಡಿದು ನಡೆದಾಡಬೇಕಾದ ಪರಿಸ್ಥಿತಿ ಉಂಟಾಗಿದೆ. ಹೇಗೂ ಹೆದ್ದಾರಿಯು ಚತುಷ್ಪಥಗೊಳ್ಳುವುದು ಎಂದು ಜನರು ಈ ಸಂಕಷ್ಟಗಳನ್ನು ಅರಗಿಸಿಕೊಳ್ಳುತ್ತಿದ್ದಾರೆ. ಆದರೆ ಹೆದ್ದಾರಿಯ ಕಾಮಗಾರಿಯು ಪೂರ್ಣಗೊಳ್ಳಲು ಹಲವು ವರ್ಷಗಳು ಬೇಕಾಗುವುದರಿಂದ ಇದೇ ಸ್ಥಿತಿಯಲ್ಲಿ ಹೆದ್ದಾರಿಯಲ್ಲಿ ಸಂಚರಿಸುವುದು ಸಾಹಸವೇ ಸರಿ.ಆದುದರಿಂದ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಕಾರ್ಯಪ್ರವೃತ್ತರಾಗಿ ಸಮಸ್ಯೆಯನ್ನು ನೀಗಿಸಬೇಕಾಗಿದೆ.

Also Read  ಪ್ರಭಾಕರ್ ಭಟ್ ಬಂಧನಕ್ಕೆ ಆಗ್ರಹಿಸಿ ಇಂದು ಉಳ್ಳಾಲ ಪೊಲೀಸ್ ಠಾಣೆಗೆ ಮುತ್ತಿಗೆ

ವರದಿ : ಸಲೀಂ ಮಾಣಿ

error: Content is protected !!
Scroll to Top