ಎಪ್ರಿಲ್ 21ರ ಮಧ್ಯರಾತ್ರಿಯವರೆಗೆ ಲಾಕ್ ಡೌನ್ ನಿರ್ಬಂಧಗಳಲ್ಲಿ ಸಡಿಲಿಕೆ ಇಲ್ಲ

ಬೆಂಗಳೂರು, ಎ.20: ಎಪ್ರಿಲ್ 21 ರ ಮಧ್ಯರಾತ್ರಿಯವರೆಗೆ ಕೊರೊನಾ ಲಾಕ್ ಡೌನ್ ನಿರ್ಬಂಧಗಳಲ್ಲಿ ಸಡಿಲಿಕೆ ಇರುವುದಿಲ್ಲ ಎಂದು ರಾಜ್ಯ ಸರಕಾರ ತಿಳಿಸಿದೆ.

ಈ ಕುರಿತಂತೆ ಎಲ್ಲ ಇಲಾಖೆಗಳ ಮುಖ್ಯಸ್ಥರು, ಡಿಸಿಗಳಿಗೆ ಸೂಚನೆ ನೀಡಲಾಗಿದ್ದು, ಎಪ್ರಿಲ್ 14ರಂದು ಕೇಂದ್ರ ಗೃಹ ಇಲಾಖೆ ಸೂಚಿಸಿರುವ ಲಾಕ್ ಡೌನ್ ನಿಯಮಾವಳಿಗಳನ್ನು ಎಪ್ರಿಲ್ 21ರ ಮಧ್ಯರಾತ್ರಿಯವರೆಗೆ ವಿಸ್ತರಿಸುವಂತೆ ಸೂಚಿಸಲಾಗಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಲಾಕ್ ಡೌನ್ 2.0, ವಿಸ್ತರಣೆ ಸಂದರ್ಭ ಎಪ್ರಿಲ್ 20ರ ನಂತರ ಪರಿಸ್ಥಿತಿಗೆ ಅನುಗುಣವಾಗಿ ಲಾಕ್ ಡೌನ್ ವಿಸ್ತರಿಸುವ, ಸಡಿಲಗೊಳಿಸುವ ಅವಕಾಶವನ್ನು ನೀಡಿದ್ದರು.

Also Read  ಕಡಬ: ಪರಿಸರದಾದ್ಯಂತ ಗುಡುಗು ಸಹಿತ ಭಾರೀ ಗಾಳಿ ಮಳೆ - ಮರ ಬಿದ್ದು ಕಾರು, ಆಟೋ ರಿಕ್ಷಾಗೆ ಹಾನಿ

ಆದರೆ ರಾಜ್ಯ ಸರ್ಕಾರ ಒಂದು ದಿನದ ಮಟ್ಟಿಗೆ ಲಾಕ್ ಡೌನ್ ವಿಸ್ತರಿಸಿದೆ.

ಈ ಮಧ್ಯೆ, ಆರ್ಥಿಕ ಚಟುವಟಿಕೆಗಳಿಗೆ ಚಾಲನೆ ನೀಡಲು ಎಪ್ರಿಲ್ 21 ರ ಮಧ್ಯರಾತ್ರಿಯಿಂದ ಕೋವಿಡ್–19 ಲಾಕ್ ಡೌನ್ ನಿರ್ಬಂಧಗಳನ್ನು ಸಡಿಲಿಸಲು ಇಂದು (ಎಪ್ರಿಲ್ 20) ಸಚಿವ ಸಂಪುಟ ಸಭೆ ನಡೆಯಲಿದೆ.

ಅಲ್ಲಿ ಮಹತ್ವದ ನಿರ್ಣಯ ತೆಗೆದುಕೊಳ್ಳುವ ಸಾಧ್ಯತೆ ಇದೆ.

error: Content is protected !!
Scroll to Top