ಉಡುಪಿ: ಲಾಕ್‌ಡೌನ್‌ ಉಲ್ಲಂಘಿಸಿ ವಿವಾಹ – ವಧು, ವರ ಸೇರಿ 11 ಜನರ ಮೇಲೆ ಪ್ರಕರಣ ದಾಖಲು

ಉಡುಪಿ, ಎ.20: ಲಾಕ್‌ಡೌನ್‌ ನಿಯಮ ಉಲ್ಲಂಘನೆ ಮಾಡಿ ಜಿಲ್ಲಾಧಿಕಾರಿಗಳು ಅನುಮತಿ ಪಡೆಯದೆ ಭಾನುವಾರ ವಿವಾಹ ಸಮಾರಂಭ ಏರ್ಪಡಿಸಿದ ಆರೋಪದಲ್ಲಿ ವಧು, ವರನ ಸಹಿತ 11 ಜನರ ಮೇಲೆ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಭಾನುವಾರ ಅಲೆವೂರು ಗ್ರಾಮದ ದುಗ್ಲಿಪದವಿನಲ್ಲಿ ವಿವಾಹ ನಡೆದಿದ್ದು ವಿವಾಹದಲ್ಲಿ ಹಲವಾರು ಜನರು ಭಾಗಿಯಾಗಿದ್ದರು. ಹಾಗೆಯೇ ವಧು ಅನುಮತಿ ಪಡೆಯದೇ ದಕ್ಷಿಣ ಕನ್ನಡ ಜಿಲ್ಲೆಯಿಂದ ಉಡುಪಿಗೆ ಬಂದಿದ್ದಾರೆ ಎಂದು ದೂರಲಾಗಿದೆ. ಈ ಕುರಿತಾಗಿ ಮಾಹಿತಿ ಲಭಿಸಿದ ಬೆನ್ನಲ್ಲೇ ತಹಶೀಲ್ದಾರ್‌ ಪ್ರದೀಪ್‌ ಕುರ್ಡೇಕರ್‌, ಕಂದಾಯ ನಿರೀಕ್ಷಕ ಶ್ರೀನಿವಾಸ್‌ ಸ್ಥಳಕ್ಕೆ ತೆರಳಿದ್ದು ಪರಿಶೀಲನೆ ನಡೆಸಿದಾಗ ಮಂಚಿಯ ಯುವಕ ಹಾಗೂ ಮಂಗಳೂರು ಬೋರುಗುಡ್ಡೆಯ ಯುವತಿ ಆದೇಶ ಉಲ್ಲಂಘನೆ ಮಾಡಿ ವಿವಾಹವಾಗಿದ್ದಾರೆ ಎಂದು ತಿಳಿದು ಬಂದಿದ್ದು ವಧು, ವರ ಸೇರಿದಂತೆ 11 ಮಂದಿಯ ಮೇಲೆ ಪ್ರಕರಣ ದಾಖಲು ಮಾಡಲಾಗಿದೆ.

Also Read  ಮಲ್ಪೆಯ ಲಾಡ್ಜ್ ನಲ್ಲಿ ವ್ಯಕ್ತಿಯೋರ್ವ ಆತ್ಮಹತ್ಯೆ..!!!

error: Content is protected !!
Scroll to Top