Breaking news ಕೊರೋನ ವೈರಸ್‌ಗೆ ಬಂಟ್ವಾಳದ ಮಹಿಳೆ ಬಲಿ: ದ.ಕ.ದಲ್ಲಿ ಮೊದಲ ಪ್ರಕರಣ

ಮಂಗಳೂರು, ಎ.19: ಉಸಿರಾಟದ ತೊಂದರೆಯಿಂದ ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿದ್ದ ಬಂಟ್ವಾಳದ ಕಸಾಬದ ಮಹಿಳೆ ಸಾವನ್ನಪ್ಪಿದ್ದು, ಅವರಿಗೆ ಕೊರೋನ ಸೋಂಕು ತಗುಲಿತ್ತೆನ್ನಲಾಗಿದೆ. ಇದರೊಂದಿಗೆ ಕೊರೋನ ವೈರಸ್ ದ.ಕ. ಜಿಲ್ಲೆಯಲ್ಲಿ ಮೊದಲ ಬಲಿ ಪಡೆದಿದೆ.

45 ವರ್ಷದ ಮಹಿಳೆ ಉಸಿರಾಟದ ತೊಂದರೆಯಿಂದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಶನಿವಾರ ಅಲ್ಲಿಂದ ವೆನ್ಲಾಕ್‌ನಲ್ಲಿರುವ ಕೋವಿಡ್ ಆಸ್ಪತ್ರೆಗೆ ರವಾನಿಸಲಾಗಿತ್ತು.

ಅವರ ಗಂಟಲ ದ್ರವದ ಮಾದರಿಯನ್ನು ಶನಿವಾರ ಪರೀಕ್ಷೆೆಗೆ ಕಳುಹಿಸಲಾಗಿತ್ತು. ರವಿವಾರ ಮಧ್ಯಾಹ್ನ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ಮಧ್ಯೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.

Scroll to Top