ರಾಜ್ಯದಲ್ಲಿ ಶನಿವಾರ 12 ಮಂದಿಗೆ ಕೊರೋನ ಸೋಂಕು ದೃಢ: ಸೋಂಕಿತರ ಸಂಖ್ಯೆ 371ಕ್ಕೆ ಏರಿಕೆ

ಬೆಂಗಳೂರು, ಎ.18: ರಾಜ್ಯದಲ್ಲಿ ಶನಿವಾರ 12 ಮಂದಿಗೆ ಕೊರೋನ ಸೋಂಕು ದೃಢಪಟ್ಟಿದೆ. ಇದರೊಂದಿಗೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 371ಕ್ಕೇರಿದೆ.

ಕಲಬುರಗಿಯಲ್ಲಿ 34 ವರ್ಷಗಳ ಪುರುಷ ಹಾಗೂ 16 ವರ್ಷದ ಬಾಲಕನಿಗೆ, ಮೈಸೂರಿನಲ್ಲಿ ಮೂವರಿಗೆ ಸೋಂಕು ದೃಢಪಟ್ಟಿದೆ. ಇದರಲ್ಲಿ ಇಬ್ಬರು ನಂಜನಗೂಡಿನ ಔಷಧ ಕಾರ್ಖಾನೆಯ ಮೊದಲ ಸೋಂಕಿತ ವ್ಯಕ್ತಿಯ ಸಂಪರ್ಕಕ್ಕೆ ಬಂದಿದ್ದರು ಎಂದು ತಿಳಿದು ಬಂದಿದೆ. ಉಳಿದಂತೆ ಬಾಗಲಕೋಟೆಯಲ್ಲಿ ಇಬ್ಬರು, ಮಂಡ್ಯ, ವಿಜಯಪುರ, ಹುಬ್ಬಳ್ಳಿ, ಬೆಳಗಾವಿ, ಗದಗದಲ್ಲಿ ತಲಾ ಒಬ್ಬರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.

Also Read  9 ಮಂದಿ ಐಪಿಎಸ್ ಗಳ ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದ ಸರಕಾರ ➤ ಸಿಐಡಿ ಎಸ್ಪಿಯಾಗಿದ್ದ ರವಿ ಡಿ.ಚನ್ನಣ್ಣನವರ್ ವಾಲ್ಮೀಕಿ ಅಭಿವೃದ್ಧಿ ನಿಗಮದ ಎಂ.ಡಿ...!

ಬೆಂಗಳೂರು ನಗರ 86 ಪ್ರಕರಣಗಳಿಂದ ಮೊದಲ ಸ್ಥಾನದಲ್ಲಿದ್ದು ಮೈಸೂರು 76 ಪ್ರಕರಣದೊಂದಿಗೆ ಎರಡನೇ ಸ್ಥಾನ, ಬೆಳಗಾವಿ 42 ಪ್ರಕರಣಗಳಿಂದ ಮೂರನೇ ಸ್ಥಾನದಲ್ಲಿದೆ. ರಾಜ್ಯದಲ್ಲಿ ಕೊರೋನ ಒಟ್ಟು 13 ಜನರು ಬಲಿಯಾಗಿದ್ದು, 92 ಜನರು ಗುಣಮುಖರಾಗಿದ್ದಾರೆ.

error: Content is protected !!
Scroll to Top