ಲಾಕ್ ಡೌನ್ ನಿಂದ ರಾಜ್ಯದ ಸಾರಿಗೆ ನಿಗಮಗಳಿಗೆ ಆರ್ಥಿಕ ಹೊಡೆತ : 1.25 ಲಕ್ಷ ನೌಕರರಿಗೆ ವೇತನ ಕಡಿತದ ಭೀತಿ

ಬೆಂಗಳೂರು, ಎ.16: ಮಾರಕ ಕೊರೋನ ಸೋಂಕಿನಿಂದಾಗಿ ದೇಶಾದ್ಯಂತ ಲಾಕ್ ಡೌನ್ ಘೋಷಿಸಲಾಗಿದ್ದು, ವಿವಿಧ ಸಂಸ್ಥೆಗಳು ಸಂಕಷ್ಟಕ್ಕೆ ಸಿಲುಕಿವೆ. ಸರ್ಕಾರದ ಇಲಾಖೆಗಳು, ಸಾರಿಗೆ ಸಂಸ್ಥೆಗಳು, ಅಂಗಡಿಗಳು ಭಾರೀ ನಷ್ಟವನ್ನು ಅನುಭವಿಸುತ್ತಿವೆ. ರಾಜ್ಯದ ಸಾರಿಗೆ ಸಂಸ್ಥೆಗಳು ತೀವ್ರ ಆರ್ಥಿಕ ಸಂಕಷ್ಟಕ್ಕೀಡಾಗಿದೆ. ಸಾರಿಗೆ ನಿಗಮಕ್ಕೆ ನೌಕರರಿಗೆ 1 ತಿಂಗಳಿಗೆ ಸಂಬಳ ನೀಡಲು 130 ಕೋಟಿ ರೂ. ಬೇಕು. ಇಷ್ಟು ದೊಡ್ಡ ಮೊತ್ತವಿಲ್ಲದ ಕಾರಣ ಸಾರಿಗೆ ನಿಗಮಗಳ ನೌಕಕರಿಗೆ ಸಂಬಳ ನೀಡುವುದು ಕಷ್ಟಕರವಾಗಿದೆ.

ಈ ಹಿನ್ನೆಲೆಯಲ್ಲಿ ಕೆಎಸ್​ಆರ್​ಟಿಸಿ, ಬಿಎಂಟಿಸಿ, ಎನ್​ಇಕೆಆರ್​ಟಿಸಿ, ಎನ್​ಡಬ್ಲುಕೆಆರ್​ಟಿಸಿ ಸಾರಿಗೆ ನಿಗಮನಗಳ 1.25 ಲಕ್ಷ ನೌಕರರಿಗೆ ಸಂಬಳ ಸಿಗುವುದು ಅನುಮಾನ ಎಂಬ ಮಾತುಗಳೂ ಕೇಳಿಬರುತ್ತಿವೆ. ಆರ್ಥಿಕ ಹೊಡೆತದಿಂದ ಈ ನಾಲ್ಕು ನಿಗಮಗಳ ನೌಕರರಿಗೆ ಸಂಬಳ ನೀಡಲು ಕಷ್ಟಕರವಾಗಿದೆ.

Also Read  ಕಡಬ: ಪರಿಸರದಲ್ಲಿ ಭಾರೀ ಗಾಳಿ ಮಳೆ - ಕೆಸರು ಗದ್ದೆಯಂತಾದ ಕಾಲೇಜು ರಸ್ತೆ

ಬಿಎಂಟಿಸಿ ಒಂದರಲ್ಲೇ ಸಂಬಳ ನೀಡಲು ತಿಂಗಳಿಗೆ 65 ಕೋಟಿ ರೂ. ಬೇಕು. ನಾಲ್ಕು ನಿಗಮಕ್ಕೆ ಸಂಬಳ ನೀಡಲು 130 ಕೋಟಿ ರೂ.ನಷ್ಟು ಹಣ ಬೇಕು. ಈಗಾಗಲೇ ಈ ಬಗ್ಗೆ ಸರ್ಕಾರಕ್ಕೆ ಕೆಎಸ್​ಆರ್​ಟಿಸಿ ಅಧಿಕಾರಿಗಳು ಪತ್ರ ಬರೆದಿದ್ದಾರೆ. ಸರ್ಕಾರ ಹಣ ಕೊಡದಿದ್ದರೆ ಈ ತಿಂಗಳ ಸಂಬಳ ನೀಡುವುದು ಕಷ್ಟವಾದ್ದರಿಂದ ರಾಜ್ಯ ಸಾರಿಗೆ ನೌಕರರು ಆತಂಕದಲ್ಲಿದ್ದಾರೆ. ಪ್ರಯಾಣಿಕರಿಂದ ಬರುವ ಟಿಕೆಟ್ ಹಣವನ್ನೇ ನಂಬಿಕೊಂಡು ಇದುವರೆಗೂ ಸಾರಿಗೆ ನಿಗಮಗಳು ನೌಕರರಿಗೆ ಸಂಬಳ ನೀಡುತ್ತಿದ್ದವು. ಈಗ ಒಂದು ತಿಂಗಳಿನಿಂದ ಟಿಕೆಟ್ ಕಲೆಕ್ಷನ್ ಆಗಿಲ್ಲ. ಪ್ರತಿ ನಿತ್ಯ ನಾಲ್ಕು ನಿಗಮಗಳಿಂದ 1 ಕೋಟಿ ಪ್ರಯಾಣಿಕರು ಓಡಾಡುತ್ತಿದ್ದರು. ಕೊರೊನಾ ಲಾಕ್​ಡೌನ್ ಹಿನ್ನೆಲೆ ಪ್ರಯಾಣಿಕರ ಸಂಚಾರವಿಲ್ಲದೆ ಟಿಕೆಟ್ ಸಂಗ್ರಹವೂ ನಿಂತುಹೋಗಿದೆ. ಹೀಗಾಗಿ ನೌಕರರಿಗೆ ವೇತನ ಹೇಗೆ ನೀಡುವುದು ಎಂಬ ಲೆಕ್ಕಾಚಾರದಲ್ಲಿ ಸಾರಿಗೆ ನಿಗಮಗಳು ತೊಡಗಿವೆ.

Also Read  ಉಡುಪಿ ಜಿ.ಪಂ. ನೂತನ ಸಿಇಒ ಆಗಿ ಡಾ| ನವೀನ್‌ ಭಟ್‌ ನೇಮಕ

error: Content is protected !!
Scroll to Top