ಒಟಿಪಿ ಮೂಲಕ ಬ್ಯಾಂಕ್ ಖಾತೆಯಿಂದ ಹಣ ದೋಚುವ ಸಕ್ರಿಯ ಜಾಲ ➤ ಅಪರಿಚಿತ ಕರೆಗೆ ಉತ್ತರಿಸುವ ಮುನ್ನ ಏನು ಮಾಡಬೇಕು..?

(ನ್ಯೂಸ್ ಕಡಬ) newskadaba.com ಕಡಬ, ಎ.13. ಇತ್ತೀಚಿನ ದಿನಗಳಲ್ಲಿ ಕೊರೋನಾ (ಕೋವಿಡ್ -19) ವೈರಸ್ ವ್ಯಾಪಕವಾಗಿ ಹರಡುತ್ತಿದ್ದು, ಈ ಬಗ್ಗೆ ಮಾನ್ಯ ಪ್ರಧಾನ ಮಂತ್ರಿಗಳ, ಮಾನ್ಯ ಮುಖ್ಯಮಂತ್ರಿಗಳ ಪರಿಹಾರ ಖಾತೆಗೆ ಹಣ ಕಳುಹಿಸುವರೇ ಹಾಗೂ ಸಾರ್ವಜನಿಕವಾಗಿ ಖಾಸಗಿ ಸಂಸ್ಥೆಗಳು ಪರಿಹಾರಕ್ಕಾಗಿ ಅಥವಾ ದೇಣಿಗೆ ನೀಡಬೇಕೆಂದು ನಕಲಿ ಸಂಸ್ಥೆಗಳು ಕರೆ ಅಥವಾ ಸಾಮಾಜಿಕ ಜಾಲತಾಣಗಳ ಮುಖಾಂತರ ಕಾರ್ಯಾಚರಿಸುತ್ತಿವೆ.

ಇಂತಹ ಸಂಸ್ಥೆಗಳು ತಮ್ಮ ಖಾತೆಯಲ್ಲಿರುವ ಹಣದ ಬಗ್ಗೆ ಮಾಹಿತಿ ನೀಡಿ ಎಂದು ನಕಲಿ ಕರೆಗಳು ಬರುತ್ತಿದ್ದು, ಅಂತಹ ಕರೆಗಳನ್ನು ನಿರ್ಲಕ್ಷಿಸಬೇಕು, ಯಾವುದೇ ಕಾರಣಕ್ಕೂ ನಕಲಿ ಕರೆಗಳನ್ನು ಸ್ವೀಕರಿಸಬಾರದು ಹಾಗೂ ತಮ್ಮ ಬ್ಯಾಂಕ್ ಅಕೌಂಟ್ ಗೆ ಸಂಬಂಧಿಸಿದಂತಹ ATM PIN Number, ATM 16 Digit Number, CVV/CVC Number ,OTP Number, Bank Account number , IFSC number, MICR Number ಮುಂತಾದ ಗೌಪ್ಯ ಮಾಹಿತಿಯನ್ನು ಯಾವುದೇ ಕಾರಣಕ್ಕೂ ಯಾರಿಗೂ ನೀಡಬಾರದು. ಈ ಬಗ್ಗೆ ಏನಾದರೂ ಸಂದೇಹಗಳಿದ್ದಲ್ಲಿ ಸಂಬಂಧಿಸಿದ ಬ್ಯಾಂಕ್ ಗಳಿಗೆ ಅಥವಾ ತಮ್ಮ ತಮ್ಮ ಬೀಟ್ ಪೊಲೀಸರಲ್ಲಿ ಹಾಗೂ ಕಡಬ ಪೊಲೀಸ್ ಉಪ ನಿರೀಕ್ಷಕರಲ್ಲಿ ದೂರವಾಣಿ ಅಥವಾ ಠಾಣೆಗೆ ಹಾಜರಾಗಿ ಮಾಹಿತಿ ನೀಡತಕ್ಕದ್ದು ಎಂದು ಕಡಬ ಪೊಲೀಸ್ ಠಾಣಾ ಉಪನಿರೀಕ್ಷಕ ರುಕ್ಮ‌ನಾಯ್ಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !!

Join the Group

Join WhatsApp Group