ಮತ್ತೆ 7 ಪಾಸಿಟಿವ್ ಪ್ರಕರಣ: ರಾಜ್ಯದಲ್ಲಿ 214ಕ್ಕೇರಿದ ಸೋಂಕಿತರ ಸಂಖ್ಯೆ



ಬೆಂಗಳೂರು, ಎ.11: ರಾಜ್ಯದಲ್ಲಿ ಇಂದು ಮತ್ತೆ ಏಳು ಜನರಿಗೆ ಕೋವಿಡ್-19 ಸೋಂಕು ದೃಢಪಟ್ಟಿದೆ. ಇದರೊಂದಿಗೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 214ಕ್ಕೇರಿದೆ.





ಇಂದಿನ ಏಳು ನೂತನ ಪ್ರಕರಣಗಳ ಪೈಕಿ ಐದು ಮಂದಿ ಸೋಂಕಿತರು ಮೈಸೂರಿನಲ್ಲಿ ವರದಿಯಾಗಿದೆ. ಉಳಿದಂತೆ ಬೆಂಗಳೂರು ನಗರದಲ್ಲಿ ಓರ್ವ ಮತ್ತು ಬೀದರ್ ನ ಓರ್ವ ಮಹಿಳೆಗೆ ಸೋಂಕು ಪತ್ತೆಯಾಗಿದೆ.






ಮೈಸೂರಿನಲ್ಲಿ ಐದು ಪ್ರಕರಣಗಳು ದೃಢವಾಗಿದ್ದು, ಎಲ್ಲರೂ ಸೋಂಕಿತ ಸಂಖ್ಯೆ 88ರ ಸಂಪರ್ಕಕ್ಕೆ ಬಂದವರಾಗಿದ್ದಾರೆ. ಇವರೆಲ್ಲರೂ ಫಾರ್ಮ ಕಂಪನಿಯ ಸಿಬ್ಬಂದಿಗಳಾಗಿದ್ದಾರೆ. ಇವರೆಲ್ಲರೂ ಮೈಸೂರಿನ ನಿಗಧಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸೋಂಕಿತ ಸಂಖ್ಯೆ 208 ಬೆಂಗಳೂರಿನ 32 ವರ್ಷದ ಪುರುಷನಾಗಿದ್ದು ಇವರು 196 ಸಂಖ್ಯೆಯ ಸೋಂಕಿತರ ಸಂಪರ್ಕಕ್ಕೆ ಬಂದವರಾಗಿದ್ದಾರೆ.

error: Content is protected !!
Scroll to Top