ಕಾಡಿನಿಂದ ಬಂದು ಮನೆಯ ಶೆಡ್ ನಲ್ಲಿ ಅವಿತ ಕಾಳಿಂಗ ➤ ಅರಣ್ಯಾಧಿಕಾರಿಗಳ ಸಹಕಾರದಲ್ಲಿ ಮತ್ತೆ ಕಾಡಿಗೆ

(ನ್ಯೂಸ್ ಕಡಬ) newskadaba.com ಕಡಬ, ಎ.07. ಇಲ್ಲಿನ ಬಂಟ್ರ ಗ್ರಾಮದ ಕೋಡಂದೂರು ಸಮೀಪದ ಮನೆಯೊಂದರ ಶೆಡ್ ನಲ್ಲಿ ಅವಿತು ಕುಳಿತಿದ್ದ ಬೃಹತ್ ಗಾತ್ರದ ಕಾಳಿಂಗ ಸರ್ಪವೊಂದನ್ನು ಅರಣ್ಯ ಅಧಿಕಾರಿಗಳ ಸಹಕಾರದಿಂದ ಹಿಡಿದು ಕಾಡಿಗೆ ಬಿಡಲಾಯಿತು.

ಮಂಗಳವಾರ ಸಂಜೆ ಕೋಡಂದೂರು ನಿವಾಸಿ ಲತೀಫ್ ಎಂಬವರ ಮನೆಯ ಸಮೀಪದ ಶೆಡ್ ಗೆ ಕಾಳಿಂಗ ಸರ್ಪವೊಂದು ನುಗ್ಗಿದೆ. ತಕ್ಷಣವೇ ಅರಣ್ಯ ಅಧಿಕಾರಿಗಳಿಗೆ ಹಾಗೂ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಸ್ಥಳಕ್ಕಾಗಮಿಸಿದ ಅರಣ್ಯಾಧಿಕಾರಿಗಳು ಹಾವನ್ನು ಹಿಡಿದು ಅರಣ್ಯಕ್ಕೆ ಬಿಡುವ ಕಾರ್ಯಾಚರಣೆ ಕೈಗೊಂಡರು. ಹಾವು ಹಿಡಿಯುವಲ್ಲಿ ನೈಪುಣ್ಯತೆಯನ್ನು ಹೊಂದಿರುವ ತಿಮ್ಮಪ್ಪ ಗೌಡ ಪಂಜರವರನ್ನು ಸ್ಥಳಕ್ಕೆ ಕರೆಸಿ ಕಾಳಿಂಗ ಸರ್ಪವನ್ನು ಹಿಡಿದು ಬಿಸ್ಲೆ ರಕ್ಷಿತಾರಣ್ಯಕ್ಕೆ ಬಿಟ್ಟಿದ್ದಾರೆ. ಪಂಜ ಉಪ ವಲಯ ಅರಣ್ಯಾಧಿಕಾರಿ ಸಂತೋಷ್ ಕುಮಾರ್ ಮಾರ್ಗದರ್ಶನದಲ್ಲಿ ಅರಣ್ಯ ರಕ್ಷಕರಾದ ಸುಬ್ರಹ್ಮಣ್ಯ, ಮಂಜುನಾಥ್, ದೇವಿಪ್ರಸಾದ್, ಅರಣ್ಯ ವೀಕ್ಷಕ ಜನಾರ್ದನ ಡಿ.ಪಿ. ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಕಡಬ ಪೊಲೀಸ್ ಠಾಣಾ ಉಪ ನಿರೀಕ್ಷಕ ರುಕ್ಮ‌ನಾಯ್ಕ್, ಸಿಬ್ಬಂದಿಗಳಾದ ಕನಕರಾಜ್ ಹಾಗೂ ಭವಿತ್ ಸಹಕರಿಸಿದರು.

error: Content is protected !!

Join the Group

Join WhatsApp Group