ಸಮುದಾಯ ಹಂತಕ್ಕೆ ಕಾಲಿಟ್ಟಿತೇ ಕೊರೋನ ವೈರಸ್: ಅನುಮಾನ ಮೂಡಿಸುತ್ತಿದೆ ಮೈಸೂರು, ಬೆಂಗಳೂರು ಪ್ರಕರಣ

ಬೆಂಗಳೂರು, ಮಾ.27: ರಾಜ್ಯದಲ್ಲಿ ಕೊರೋನ ವೈರಸ್ 3ನೇ ಹಂತಕ್ಕೆ ಕಾಲಿಟ್ಟಿದೆಯೇ ಎಂಬ ಅನುಮಾನ ಕಾಡತೊಡಗಿದೆ. ಯಾವುದೇ ವಿದೇಶ ಪ್ರಯಾಣದ ಇತಿಹಾಸವಿಲ್ಲದ ಹಾಗೂ ವಿದೇಶದಿಂದ ಬಂದವರ ಸಂಪರ್ಕ ಸಾಧಿಸದ ಇಬ್ಬರು ವ್ಯಕ್ತಿಗಳಲ್ಲಿ ಕೊರೋನ ವೈರಸ್ ಸೋಂಕು ದೃಢಪಟ್ಟಿದ್ದು ಹೀಗಾಗಿ ಕರ್ನಾಟಕದಲ್ಲಿ ಸಮುದಾಯಕ್ಕೆ ಹಂತಕ್ಕೆ ತಲುಪಿದೆಯೇ ಎಂಬ ಶಂಕೆ ವ್ಯಕ್ತವಾಗಿದೆ.

ಮಾ.26ರಂದು ಒಂದೇ ದಿನ ರಾಜ್ಯದಲ್ಲಿ 4 ಪ್ರಕರಣಗಳು ಪತ್ತೆಯಾಗಿದೆ. ಆದರೆ ಇದಕ್ಕಿಂತಲೂ ಅತಂಕಕಾರಿ ಸಂಗತಿ ಇಬ್ಬರಿಗೂ ಟ್ರಾವೆಲ್ ಹಿಸ್ಟರಿ ಹಾಗೂ ಟ್ರಾವೆಲ್ ಹಿಸ್ಟರಿ ಉಳ್ಳವರ ಸಂಪರ್ಕವಿಲ್ಲದೆ ಕೊರೋನಾ ಸೋಂಕು ತಗುಲಿರುವುದು.

ಬೆಂಗಳೂರು ಗ್ರಾಮಾಂತರ ಭಾಗದಲ್ಲಿ ಓರ್ವ ವ್ಯಕ್ತಿಗೆ ಹಾಗೂ ನಂಜನಗೂಡಿನ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಉದ್ಯೋಗಿಗೆ ಕೊರೋನ ಸೋಂಕು ತಗುಲಿದೆ. ಸದ್ಯ ಈ ಇಬ್ಬರ ಪ್ರಕರಣವನ್ನು ವೈದ್ಯಕೀಯ ತನಿಖೆಗೆ ನೀಡಲಾಗಿದ್ದು, ಇವರ ಚಲನವಲನದ ಬಗ್ಗೆಯ ಸಂಪೂರ್ಣ ಪರಾಮರ್ಶೆ ನಡೆದು ತನಿಖಾ ವರದಿಗಳು ಬಂದ ನಂತರ ಹೇಗೆ , ಎಲ್ಲಿ, ಯಾವ ರೀತಿಯಲ್ಲಿ ವೈರಸ್ ತಗುಲಿರಬಹುದು ಎಂದು ತಿಳಿಯಲಿದೆ.

Also Read  ಸವಣೂರು: ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ಪಕ್ಕದ ಮನೆಯ ಟ್ಯಾಂಕ್ ನಲ್ಲಿ ಪತ್ತೆ..!

error: Content is protected !!
Scroll to Top