ಲಾಕ್‌ಡೌ‌ನ್ ಉಲ್ಲಂಘಿಸಿದರೆ ಲೈಸೆನ್ಸ್ ರದ್ದು

ಬೆಂಗಳೂರು , ಮಾ.25: ದೇಶಾದ್ಯಂತ ಕೊರೋನ ವೈರಸ್‌ ನಿಯಂತ್ರಣಕ್ಕೆ ಲಾಕ್‌ ಡೌನ್‌ ಘೋಷಿಸಿದ್ದರೂ, ಲಾಕ್‌ ಡೌನ್‌ ಉಲ್ಲಂಘಿಸಿ ಜನರು ಅನಗತ್ಯವಾಗಿ ಓಡಾಡುತ್ತಿರುವ ಹಿನ್ನೆಲೆ ಪೊಲೀಸರು ಕೆಲವೆಡೆ ಲಾಠಿ ಚಾರ್ಜ್ ಮಾಡಿದ್ದಾರೆ.

 

ವಾಹನಗಳು ಲಾಕ್‌ ಡೌನ್‌ ಸಂದರ್ಭ ಅನಗತ್ಯವಾಗಿ ರಸ್ತೆಗಿಳಿದರೆ ಅಂತವರ ಲೈಸೆನ್ಸ್‌ ರದ್ದು ಮಾಡಲು ಉತ್ತರ ಕನ್ನಡ ಡಿಸಿ ಸೂಚಿಸಿದ್ದಾರೆ. ವಾಹನ ಸವಾರರ ಲೈಸೆನ್ಸ್ ರದ್ದು ಮಾಡಲು ಉತ್ತರ ಕನ್ನಡ ಜಿಲ್ಲಾಧಿಕಾರಿ ಡಾ.ಹರೀಶ್ ಕುಮಾರ್ ಸೂಚನೆ ನೀಡಿದ್ದಾರೆ.

ದಿನದಿಂದ ದಿನಕ್ಕೆ ಕೊರೋನ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆ, ಕೇಂದ್ರ ಸರ್ಕಾರ ದೇಶಾದ್ಯಂತ ಲಾಕ್‌ಡೌನ್‌ ಘೋಷಿಸಿದೆ. ಆದರೂ ಲಾಕ್‌ ಡೌನ್‌ ಇದ್ದರೂ ಜನರು ಅನಗತ್ಯವಾಗಿ ವಾಹನಗಳಲ್ಲಿ ಓಡಾಡುತ್ತಿದ್ಧಾರೆ. ಹಾಗಾಗಿ ಲೈಸೆನ್ಸ್‌ ರದ್ದು ಮಾಡುವುದಾಗಿ ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದ್ದಾರೆ.

Also Read  ಶರತ್ ಶವಯಾತ್ರೆ ವೇಳೆ ಕಲ್ಲು ತೂರಾಟ ಪ್ರಕರಣ; ಎಫ್ಐಆರ್‌ಗೆ ಹೈಕೋರ್ಟ್‌ ತಡೆಯಾಜ್ಞೆ

error: Content is protected !!
Scroll to Top