ಮಂಗಳೂರು, ಮಾ.25: ಕೊರೋನ ವೈರಸ್ ಹರಡದಂತೆ ತಡೆಕಟ್ಟಲು ದ.ಕ. ಜಿಲ್ಲಾದ್ಯಂತ ಸೆಕ್ಷನ್ 144ವಿಧಿಸಿದ್ದು, ಸಾರ್ವಜನಿಕರು ಅಗತ್ಯ ವಸ್ತುಗಳ ಖರೀದಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಆದರೆ ಇದೇ ನೆಪದಲ್ಲಿ ಮಾರ್ಕೆಟ್ನಲ್ಲಿ ಗುಂಪು ಗುಂಪಾಗಿ ಬಂದು ವಸ್ತುಗಳನ್ನು ಖರೀಸುವುದು ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ನಾಳೆಯಿಂದ ಎಲ್ಲ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಲಾಗುವುದು. ಅಗತ್ಯ ವಸ್ತುಗಳನ್ನು ತಮ್ಮ ಮನೆಗಳಿಗೆ ತಲುಪಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಸಂಸದ ನಳಿನ್ ಕುಮಾರ್ ಕಟೀಲು ಹೇಳಿದ್ದಾರೆ.
ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರಿಂದ ಕೊರೋನ ವೈರಸ್ ಹರಡುವುದನ್ನು ನಿಯಂತ್ರಿಸಬಹುದು, ಆದರೆ ಹಲವೆಡೆ ಮಾರ್ಕೆಟ್ , ಅಗತ್ಯ ವಸ್ತುಗಳ ಖರೀದಿಗೆ ಜನ ಒಮ್ಮೆಲೆ ಮುಗಿಬೀಳುತ್ತಿದ್ದಾರೆ. ವರ್ತಕರು ಗ್ರಾಹಕರು ಯಾವುದೇ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳದೆ ವ್ಯಾಪಾರ ವಹಿವಾಟು ಮಾಡುವ ಬಗ್ಗೆ ತಿಳಿದುಬಂದಿದ್ದು ಹೀಗಾಗಿ ನಾಳೆ ಎಲ್ಲವನ್ನು ಬಂದ್ ಮಾಡಲಾಗುವುದು. ಈ ಬಗ್ಗೆ ಜಿಲ್ಲೆಯ ಎಲ್ಲಾ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಮಾತುಕತೆ ಮಾಡುತ್ತಿದ್ದೇವೆ.
ಜನರಿಗೆ ಬೇಕಾದ ಎಲ್ಲಾ ಸವಲತ್ತುಗಳನ್ನು ನಾವೇ ಮನೆಗೆ ತಲುಪಿಸುತ್ತೇವೆ. ಇದಕ್ಕಾಗಿ ಶೀಘ್ರವೇ ವ್ಯವಸ್ಥೆ ಮಾಡಲಾಗುವುದು. ಸರ್ಕಾರದ ಕಡೆಯಿಂದ ಪ್ರತಿ ಮನೆಗೆ ಹೇಗೆ ತಲುಪಿಸೋದು, ಅಪಾರ್ಟ್ ಮೆಂಟ್ ಗಳಿಗೆ ಹೇಗೆ ತಲುಪಿಸೋದು ಎನ್ನುವ ಬಗ್ಗೆ ಈಗಾಗಲೇ ಮಾತುಕತೆ ನಡೆಯುತ್ತಿದೆ ಎಂದು ಅವರು ತಿಳಿಸಿದರು.
Related Posts:
- ಚುನಾವಣಾ ನಿಯಮ ತಿದ್ದುಪಡಿ ವಿರುದ್ಧ ಸುಪ್ರೀಂ ಕೋರ್ಟ್ ಮೊರೆ ಹೋದ ಕಾಂಗ್ರೆಸ್
- 'ಕಾಂಗ್ರೆಸ್ ಶಕ್ತಿ ಏನೆಂದು ನಮಗಿಂತ ಚೆನ್ನಾಗಿ ಬಿಜೆಪಿಯವರಿಗೆ ಅರಿವಿದೆ'- ಡಿಕೆಶಿ
- ಸಿ.ಟಿ ರವಿ ಅಶ್ಲೀಲ ಪದ ಬಳಕೆ ಮಾಡಿಲ್ಲ ಅಂತ ಧರ್ಮಸ್ಥಳ ಮಂಜುನಾಥನ ಮೇಲೆ ಪ್ರಮಾಣ ಮಾಡಿ ಹೇಳಲಿ;…
- ಬೆಂಗಳೂರು: ಶೀಘ್ರದಲ್ಲೇ ಆಟೋ ದರಲ್ಲೂ ಏರಿಕೆ, ಪ್ರತಿ ಕಿ.ಮೀಗೆ 5 ರೂ. ಹೆಚ್ಚಳ ಸಾಧ್ಯತೆ..!
- ಸುಬ್ರಹ್ಮಣ್ಯ: ಅರ್ಚಕರ ಮನೆಯಿಂದ 1.15 ಲ.ರೂ. ಮೌಲ್ಯದ ಚಿನ್ನಾಭರಣ-ನಗದು ಕಳವು
- ಲೈಂಗಿಕ ದೌರ್ಜನ್ಯ, ಅತ್ಯಾಚಾರ, ಆಸಿಡ್ ದಾಳಿ ಸಂತ್ರಸ್ತರಿಗೆ ಉಚಿತ ಚಿಕಿತ್ಸೆ ನಿರಾಕರಿಸುವಂತಿಲ್ಲ-…
- ಬಳ್ಳಾರಿಯಲ್ಲಿ ಕಳೆದ 8 ತಿಂಗಳ ಅವಧಿಯಲ್ಲಿ 23 ಬಾಣಂತಿಯರ ನಿಧನ
- ಸಾಮಾಜಿಕ ಮಾಧ್ಯಮದ ಪ್ರಭಾವಿ ಯುವತಿಯರೇ ಸೈಬರ್ ವಂಚಕರ ಟಾರ್ಗೆಟ್!
- ಪ್ರತಿ ಕಂಬಳಕ್ಕೂ 5 ಲ.ರೂ. ನೀಡಲು ರಾಜ್ಯ ಸರ್ಕಾರ ಆದೇಶ
- ಕ್ರಿಸ್ಮಸ್-ಹೊಸ ವರ್ಷಾಚರಣೆ: ಅಹಿತಕರ ಘಟನೆ ನಡೆದರೆ DCPಗಳೇ ಹೊಣೆ- ರಾಜ್ಯ ಸರ್ಕಾರ
- ದ.ಕ. ಸರ್ಕಾರಿ ಶಾಲೆ ಉಳಿಸಲು 'ನಮಗಾಗಿ' ವೆಬ್ ಪೋರ್ಟಲ್ ಬಿಡುಗಡೆ
- ಅಕ್ರಮ ಮದ್ಯ ಮಾರಾಟ ಪ್ರಶ್ನಿಸಿದ ವ್ಯಕ್ತಿಗೆ ಕರೆಂಟ್ ಶಾಕ್ ನೀಡಿ ಕೊಲೆ
- 'ಕಾಂಗ್ರೆಸ್ ನಲ್ಲಿ ಈಗಿರುವವರೆಲ್ಲ ನಕಲಿ ಗಾಂಧಿಗಳು'- ಪ್ರಲ್ಹಾದ ಜೋಶಿ
- 'ಸಿ.ಟಿ ರವಿಗೆ ಶಿಕ್ಷೆ ಆಗುವವರೆಗೂ ಬಿಡುವುದಿಲ್ಲ, ಕಾನೂನು ಹೋರಾಟ ಮಾಡುತ್ತೇನೆ '- ಲಕ್ಷ್ಮಿ ಹೆಬ್ಬಾಳ್ಕರ್
- ಕರ್ನಾಟಕದಲ್ಲಿ ಮತ್ತೋರ್ವ ಬಾಣಂತಿ ಸಾವು: ಖಾಸಗಿ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯ ಆರೋಪ!
- ಕಳೆದ ಒಂದೂವರೆ ವರ್ಷದಲ್ಲಿ ದಾಖಲೆ ಪ್ರಮಾಣದಲ್ಲಿ ಯುವ ಜನತೆಗೆ ಸರ್ಕಾರಿ ಉದ್ಯೋಗ- ಪ್ರಧಾನಿ ಮೋದಿ