ಅನಗತ್ಯವಾಗಿ ಮಧ್ಯಾಹ್ನದ ಬಳಿಕ ಜನರು ಪೇಟೆಗೆ ಬಂದರೆ ಕಾನೂನು ಕ್ರಮ ➤ ಕಡಬ ಠಾಣಾ ಎಸ್ಐ ರುಕ್ಮ ನಾಯ್ಕ್ ಎಚ್ಚರಿಕೆ

(ನ್ಯೂಸ್ ಕಡಬ) newskadaba.com ಕಡಬ, ಮಾ.24. ಕೊರೋನಾ ಮುಂಜಾಗ್ರತಾ ಕ್ರಮಕ್ಕೆ ಒಂದು ಹೆಜ್ಜೆ ಮುಂದೆ ಇಟ್ಟ ಸರಕಾರ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸದಿದ್ದರೆ ಕಾನೂನು ಕ್ರಮಕ್ಕೆ ಮುಂದಾದ ಬೆನ್ನಲ್ಲೆ ಜನರು ಪಾಲಿಸುವಲ್ಲಿ ಮುಂದಾದಂತೆ ಕಾಣುತ್ತಿದೆ.

ಕಡಬದಾದ್ಯಂತ ದಿನಸಿ ಅಂಗಡಿ, ತರಕಾರಿ, ಮೆಡಿಕಲ್ ಶಾಪ್, ಆಸ್ಪತ್ರೆ, ಬ್ಯಾಂಕ್ ಹೊರತುಪಡಿಸಿದರೆ ಉಳಿದೆಲ್ಲಾ ಅಂಗಡಿಗಳು ಬಂದ್ ಆಗಿದೆ. ದಿನಸಿ ಅಂಗಡಿಗಳು ಮಧ್ಯಾಹ್ನದವರೆಗೆ ಮಾತ್ರ ತೆರೆಯಲಿದ್ದು ಬಳಿಕ ಬಂದ್ ಆಗಲಿದೆ. ಕಡಬದಾದ್ಯಂತ ಈಗಾಗಲೇ ಬಂದ್ ಆಗಿದ್ದು ಮಧ್ಯಾಹ್ನದ ವೇಳೆಗೆ ಎಲ್ಲಾ ಅಂಗಡಿಗಳು ಬಂದ್ ಆಗಲಿದೆ. ಮತ್ತೆಯೂ ಜನರು ಅನಗತ್ಯವಾಗಿ ತಿರುಗಾಡಿದರೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಕಡಬ ಎಸ್.ಐ. ರುಕ್ಮ ನಾಯ್ಕ್ ಎಚ್ಚರಿಸಿದ್ದಾರೆ.

Also Read  ನಾಲ್ಕೂರು ಗ್ರಾಮದಲ್ಲಿ ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯ

error: Content is protected !!
Scroll to Top