ಜನತಾ ಕರ್ಫ್ಯೂ: ಮಂಗಳೂರು ಸ್ತಬ್ಧ

ಮಂಗಳೂರು, ಮಾ.22: ಕೊರೋನ ವೈರಸ್ ತಡೆಯುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ನೀಡಿರುವ ಜನತಾ ಕರ್ಫ್ಯೂಗೆ ಮಂಗಳೂರಿನಲ್ಲಿ ಭಾರೀ ಬೆಂಬಲ ದೊರೆತಿದೆ.


ಎಂದಿಗೂ ಜನರ ಓಡಾಟದಿಂದ ಕೂಡಿರುವ ಮಂಗಳೂರು ಇಂದು ಮುಂಜಾನೆಯೇ ಮೌನದಿಂದ ಕೂಡಿದೆ. ರವಿವಾರ ಮನೆಯಲ್ಲೇ ಉಳಿದುಕೊಳ್ಳಲು ತೀರ್ಮಾನ ಮಾಡಿರುವ ನಾಗರಿಕರು ಶನಿವಾರವೇ ಪೇಟೆಗೆ ತೆರಳಿ ಬೇಕಾಗಿರುವ ಅಗತ್ಯ ವಸ್ತುಗಳ ಖರೀದಿ ಮಾಡಿದ್ದಾರೆ.

ಎಲ್ಲಾ ಅಂಗಡಿ ಮುಗ್ಗಟ್ಟುಗಳು ಸಂಪೂರ್ಣವಾಗಿ ಬಂದ್ ಆಗಿದ್ದು ಕೇವಲ ಬೆರಳೆಣಿಕೆಯ ಬೈಕ್‌ಗಳನ್ನು ಹೊರತುಪಡಿಸಿ ಬೇರಾವ ವಾಹನಗಳು ರಸ್ತೆಗೆ ಇಳಿದಿಲ್ಲ. ದೇವಾಲಯ, ಮಸೀದಿ, ಚರ್ಚ್‌ಗಳು ಕೂಡಾ ಮುಚ್ಚಲಾಗಿದೆ. ಪ್ರತಿ ಭಾನುವಾರ ಚರ್ಚ್‌ನಲ್ಲಿ ನಡೆಯುತ್ತಿದ್ದ ಪ್ರಾರ್ಥನೆಯನ್ನು ರದ್ದು ಮಾಡಲಾಗಿದ್ದು ಮನೆಯಲ್ಲಿಯೇ ಪ್ರಾರ್ಥನೆ ಮಾಡುವಂತೆ ಹೇಳಲಾಗಿದೆ.

Also Read  ಸಕ್ರಿಯವಾಗಿದೆ ಒಟಿಪಿ ಮೂಲಕ ಬ್ಯಾಂಕಿನಿಂದ ಹಣ ದೋಚುವ ಜಾಲ ➤ ಅಪರಿಚಿತ ಕರೆಗೆ ಉತ್ತರಿಸುವ ಮುನ್ನ ಏನು ಮಾಡಬೇಕು..?

ಇನ್ನೂ ಸರಕು ಸಾಗಾಟದ ವಾಹನಗಳು ಕೂಡಾ ಸಂಚಾರ ಸ್ಥಗಿತಗೊಂಡಿದ್ದು ಕೆಲವು ಲಾರಿಗಳು ಪಣಂಬೂರು, ಕೂಳೂರು ಪ್ರದೇಶದಲ್ಲಿ ನಿಲ್ಲಿಸಲಾಗಿದೆ. ಹಾಗೆಯೇ ರೈಲು ನಿಲ್ದಾಣ ಕೂಡಾ ಸ್ಥಬ್ಧವಾಗಿದೆ.

ಹಾಲು ಪೇಪರ್ ಮಾರಾಟ ಯಾಥಾಸ್ಥಿತಿಯಲ್ಲಿದ್ದು ಜನರು 7 ಗಂಟೆಗೂ ಮುನ್ನವೇ ಅಗತ್ಯ ವಸ್ತುಗಳ ಖರೀದಿಗೆ ಮುಗಿಬಿದ್ದಿದ್ದು ಮುಂಜಾನೆ 4 ಗಂಟೆಗೇ ಹಾಲು ಪೇಪರ್ ಮಾರಾಟ ಆರಂಭಗೊಂಡಿದೆ. ಆ್ಯಂಬುಲೆನ್ಸ್ ಕೂಡಾ ಸಂಚಾರ ಮಾಡುತ್ತಿದೆ.

error: Content is protected !!
Scroll to Top