ಕಾಸರಗೋಡು: ಕೊರೋನ ಸೋಂಕು ಪತ್ತೆಯಾದ ಯುವಕನ ರೋಟ್ ಮ್ಯಾಪ್ ಬಿಡುಗಡೆ

ಕಾಸರಗೋಡು, ಮಾ.17: ನಿನ್ನೆ ಕಾಸರಗೋಡಿನಲ್ಲಿ ಕೊರೋನ ಸೋಂಕು ಪಾಸಿಟಿವ್ ಆದ ಯುವಕನ ಓಡಾಡಿದ ಸ್ಥಳದ ಬಗ್ಗೆ ಜಿಲ್ಲಾಡಳಿತ ರೂಟ್ ಮ್ಯಾಪ್ ತಯಾರಿಸಿದ್ದು, ಯುವಕ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಇಳಿದು ಮನೆ ತನಕ ಬಂದಿರುವ ಮಾಹಿತಿಯನ್ನು ಜಿಲ್ಲಾಡಳಿತ ಬಿಡುಗಡೆಗೊಳಿಸಿದೆ.

ಮಾರ್ಚ್ 14ರಂದು ಮುಂಜಾನೆ 5:20ಕ್ಕೆ ಸೋಂಕಿತ ಯುವಕ ದುಬೈನಿಂದ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದ್ದು, ಅಲ್ಲಿಂದ 7 ಗಂಟೆ ಸುಮಾರಿಗೆ ಯುವಕನನ್ನು ಕರೆದೊಯ್ಯಲೂ ಕಾಸರಗೋಡಿನಿಂದ ತೆರಳಿದ ಸಂಬಂಧಿಕರು ನಿಲ್ದಾಣಕ್ಕೆ ತಲುಪಿದ್ದಾರೆ. ಬಳಿಕ ಖಾಸಗಿ ಕಾರಿನಲ್ಲಿ ಅಲ್ಲಿಂದ ಹೊರಟು ಕಾಸರಗೋಡಿಗೆ ತಲಪುತ್ತಾರೆ. ಮಂಗಳೂರಿನಿಂದ ಕಾಸರಗೋಡಿನ ದಾರಿ ಮಧ್ಯೆ ಎಲ್ಲಿಯೂ ಕಾರು ನಿಲ್ಲಿಸಿರುವುದಿಲ್ಲ.

ಕಾಸರಗೋಡಿನಲ್ಲಿ ಖಾಸಗಿ ಆಸ್ಪತ್ರೆಗೆ ತೆರಳಿ ತಪಾಸಣೆ ನಡೆಸಿ ರಕ್ತದ ಮಾದರಿಯನ್ನು ತಪಾಸಣೆಗೆ ನೀಡುತ್ತಾರೆ. ಅಲ್ಲಿಂದ 8 ಗಂಟೆಗೆ ಸ್ನೇಹಿತರು ಸೇರಿದಂತೆ ನಾಲ್ವರ ಜೊತೆ ಇನ್ನೊಂದು ಆಸ್ಪತ್ರೆಯ ಕ್ಯಾಂಟಿನ್‌ಗೆ ತೆರಳಿ ಆಹಾರ ಸೇವಿಸುತ್ತಾರೆ.

ಬಳಿಕ ಸರಕಾರಿ ಜನರಲ್ ಆಸ್ಪತ್ರೆಗೆ ಬಂದು ವಿದೇಶದಿಂದ ಬಂದಿರುವುದಾಗಿ ಮಾಹಿತಿ ನೀಡುತ್ತಾರೆ. ಮಧ್ಯಾಹ್ನ 1 ಗಂಟೆಗೆ ಬೇವಿಂಜೆಯಲ್ಲಿರುವ ಸಂಬಂಧಿಕರ ಮನೆಗೆ ತೆರಳುತ್ತಾರೆ. 1:30ಕ್ಕೆ ತನ್ನ ಮನೆಗೆ ತಲಪುತ್ತಾರೆ. ಮನೆಯಲ್ಲಿ ಮೂರು ದಿನ ನಿಗಾದಲ್ಲಿ ಕಳೆಯುತ್ತಿದ್ದು, ಸೋಮವಾರ ರಾತ್ರಿ ಬಂದ ವೈದ್ಯಕೀಯ ಪರೀಕ್ಷೆಯಲ್ಲಿ ಕೊರೋನ ಸೋಂಕು ಪತ್ತೆಯಾಗಿದ್ದು, ಯುವಕನನ್ನು ಆಸ್ಪತೆಯ ವಿಶೇಷ ವಾರ್ಡ್‌ಗೆ ದಾಖಲಿಸಲಾಗಿ ಚಿಕಿತ್ಸೆ ಪ್ರಾರಂಭಿಸಲಾಗಿತ್ತು.

error: Content is protected !!

Join the Group

Join WhatsApp Group