ಸಮುದ್ರದಲ್ಲಿ ಪತ್ರಕರ್ತರ ನೌಕಾ ವಿಹಾರ

ಮಂಗಳೂರು, ಮಾ.8:ನಗರದಲ್ಲಿ ನಡೆಯುತ್ತಿರುವ ಪತ್ರಕರ್ತರ ರಾಜ್ಯ ಸಮ್ಮೇಳನದಲ್ಲಿ ಪಾಲ್ಗೊಂಡ ವಿವಿಧ ಜಿಲ್ಲೆಗಳ ನೂರಾರು ಪತ್ರಕರ್ತರು ಶನಿವಾರ ಸಮುದ್ರ ಅಲೆಗಳ ಮಧ್ಯೆ ನೌಕಾ ವಿಹಾರ ನಡೆಸಿದರು.

ಸುಮಾರು 800ಕ್ಕೂ ಅಧಿಕ ಪತ್ರಕರ್ತರಿಗೆ ರಾಣಿ ಅಬ್ಬಕ್ಕ ನೌಕೆಯಲ್ಲಿ ಸಮುದ್ರ ವಿಹಾರಕ್ಕೆ ಅವಕಾಶ ಕಲ್ಪಿಸಲಾಗಿತ್ತು. ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ ಪತ್ರಕರ್ತರು ಸಮುದ್ರ ಅಲೆಗಳ ತೇಲುತ್ತಾ ಸಾಗಿದ ನೌಕೆಯಲ್ಲಿ ಸಂಭ್ರಮಿಸಿದರು. ನೌಕಾ ವಿಹಾರದ ಕುರಿತು ಪ್ರತಿನಿಧಿಗಳು ಉತ್ತಮ ಪ್ರತಿಕ್ರಿಯೆ ವ್ಯಕ್ತಪಡಿಸಿದರು. ಸಮುದ್ರ ವಿಹಾರದ ಸೊಬಗನ್ನು ಆಸ್ವಾದಿಸಿದರು.

Also Read  ಮಲ್ಪೆ: ಸಮುದ್ರಕ್ಕೆ ಹಾರಿ ವ್ಯಕ್ತಿ ಆತ್ಮಹತ್ಯೆ..!

 

error: Content is protected !!
Scroll to Top