ವಿಶ್ವದಾದ್ಯಂತ ಕೊರೋನಗೆ 3,282 ಮಂದಿ ಬಲಿ

ಮಾಸ್ಕೋ, ಮಾ.7: ಡೆಡ್ಲಿ ಕೊರೋನ ವೈರಸ್‌ಗೆ ಜಗತ್ತಿನಾದ್ಯಂತ ಬಲಿಯಾದವರ ಸಂಖ್ಯೆ 3,282ಕ್ಕೆ ಏರಿಕೆಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಮಾಹಿತಿ ನೀಡಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ 2,241 ಹೊಸ ಸೋಂಕಿತರು ಪತ್ತೆಯಾಗಿದ್ದು, 84 ಜನರು ಸಾವನ್ನಪ್ಪಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ಸಾವನ್ನಪ್ಪಿದವರು ಮಾತ್ರವಲ್ಲದೇ ವಿಶ್ವದಾದ್ಯಂತ ಸೋಂಕು ಪೀಡಿತರ ಸಂಖ್ಯೆ 95,333ಕ್ಕೆ ಏರಿಕೆಯಾಗಿದ್ದು, ಇದರಲ್ಲಿ 80,565 ಜನರು ಚೀನಾ ಪ್ರಜೆಗಳು ಎಂದು ವಿಶ್ವ ಸಂಸ್ಥೆ ತಿಳಿಸಿದೆ.

ಚೀನಾದ ವುಹಾನ್ ಪ್ರಾಂತ್ಯದಲ್ಲಿ 2019ರ ಡಿಸೆಂಬರ್‌ನಲ್ಲಿ ಕಂಡುಬಂದಿದ್ದ ಕೊರೋನ ವೈರಸ್ ಇದೀಗ ಜಗತ್ತಿನಾದ್ಯಾಂತ ಪಸರಿಸಿದ್ದು, ವಿಶ್ವ ಆರೋಗ್ಯ ಸಂಸ್ಥೆ ಜನವರಿಯಲ್ಲಿ ಜಾಗತಿಕ ಆರೋಗ್ಯ ತುರ್ತು ಪರಿಸ್ಥಿತಿಯನ್ನು ಘೋಷಿಸಿತ್ತು.

Also Read  ಮಂಗಳೂರು: ಡ್ರಗ್ಸ್ ದಂಧೆ ಪ್ರಕರಣ, 3 ದಿನದಲ್ಲಿ 19 ಮಂದಿ ಅರೆಸ್ಟ್‌ ➤ಬಂಧಿತರ ಸಂಖ್ಯೆ 19 ಕ್ಕೆ ಏರಿಕೆ..!

ಕೊರೋನ ವೈರಸ್‌ಗೆ ಅಮೆರಿಕಾದಲ್ಲಿ ಬಲಿಯಾದವರ ಸಂಖ್ಯೆ 12ಕ್ಕೇರಿದೆ. ಅಲ್ಲದೇ, ಹೊಸದಾಗಿ 53 ಜನರಿಗೆ ಸೋಂಕು ಇರುವುದು ಧೃಢಪಟ್ಟಿದೆ.

error: Content is protected !!