ಮಂಗಳೂರು ಗೋಲಿಬಾರ್ ಪ್ರಕರಣ: ವಿಚಾರಣೆಗೆ ಹಾಜರಾಗುವಂತೆ ಪೊಲೀಸ್ ಆಯುಕ್ತರಿಗೆ ನೋಟಿಸ್

ಮಂಗಳೂರು, ಮಾ.4: ಮಂಗಳೂರು ಗಲಭೆ ಹಾಗೂ ಗೋಲಿಬಾರ್ ಪ್ರಕರಣಕ್ಕೆ ಸಂಬಂಧಿಸಿ ಬುಧವಾರ ಮ್ಯಾಜಿಸ್ಟ್ರೀರಿಯಲ್ ವಿಚಾರಣೆಯು ನಗರದ ಎಸಿ ಕಚೇರಿ ಕೋರ್ಟ್‌ನಲ್ಲಿ ನಡೆಯಿತು.

ತನಿಖಾಧಿಕಾರಿಯಾದ ಉಡುಪಿ ಜಿಲ್ಲಾಧಿಕಾರಿಯೂ ಆಗಿರುವ ಜಗದೀಶ್ ವಿಚಾರಣೆ ನಡೆಸಿದರು.

ಬುಧವಾರ 176 ಸಾಕ್ಷಿಗಳ ಪೈಕಿ ಎಸಿಪಿಗಳ ಸಹಿತ 29 ಪೊಲೀಸರು ಬಂದು ಸಾಕ್ಷ್ಯ ಹೇಳಿದರು. ಮಾ.9ಕ್ಕೆ ಹಾಜರಾಗುವಂತೆ ಡಿಸಿಪಿ ಅರುಣಾಂಶುಗಿರಿ ಹಾಗೂ ಮಾ.12ರಂದು ವಿಚಾರಣೆಗೆ ಹಾಜರಾಗುವಂತೆ ನಗರ ಪೊಲೀಸ್ ಆಯುಕ್ತ ಡಾ. ಪಿ.ಎಸ್.ಹರ್ಷರಿಗೆ ನೋಟಿಸ್ ಜಾರಿ ಮಾಡಲಾಗಿದೆ.

ಮಂಗಳೂರಿನಲ್ಲಿ ನಡೆದ ಗೋಲಿಬಾರ್ ಹಾಗೂ ಗಲಭೆ ಪ್ರಕರಣಕ್ಕೆ ಸಂಬಂಧಿಸಿ ಉಡುಪಿ ಜಿಲ್ಲಾಧಿಕಾರಿ ಮ್ಯಾಜಿಸ್ಟ್ರೀರಿಯಲ್ ತನಿಖೆಯಲ್ಲಿ ಡಿ.31ರಂದು ಸ್ಥಳ ಮಹಜರು, ಫೆ.6, ಜ.7, ಫೆ.13ರಂದು ಸಾರ್ವಜನಿಕ ಲಿಖಿತ ಸಾಕ್ಷಿ ಹೇಳಿಕೆ ಹಾಗೂ ವೀಡಿಯೊ ದೃಶ್ವಾವಳಿ ಸಲ್ಲಿಸಲು ಹಾಗೂ ಫೆ. 25 ರಂದು ಪೊಲೀಸರಿಗೆ ಖುದ್ದು ಹಾಜರಾಗಿ ಸಾಕ್ಷಿ ಸಲ್ಲಿಸಲು ಅವಕಾಶ ನೀಡಲಾಗಿತ್ತು.

Also Read  ಶಾಲೆಯ ಬಳಿ ಬಾರ್ ತೆರೆಯದಂತೆ ವಿದ್ಯಾರ್ಥಿಗಳಿಂದ ಪ್ರತಿಭಟನೆ

ಕಳೆದ ವರ್ಷ ಡಿ. 19 ರಂದು ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಮಂಗಳೂರಿನಲ್ಲಿ ಪ್ರತಿಭಟನೆ ಸಂದರ್ಭ ಪ್ರತಿಭಟನಕಾರರು ಹಾಗೂ ಪೊಲೀಸರ ನಡುವೆ ಘರ್ಷಣೆಯಾಗಿತ್ತು. ಈ ಸಂದರ್ಭದಲ್ಲಿ ನಡೆದ ಗೋಲಿಬಾರ್‌ನಿಂದಾಗಿ ಇಬ್ಬರು ಬಲಿಯಾಗಿದ್ದರು ಹಾಗೂ ಹಲವರಿಗೆ ಗಾಯವಾಗಿತ್ತು.

error: Content is protected !!
Scroll to Top