ಮಂಗಳೂರು, ಫೆ.27: ದ.ಕ. ಜಿಲ್ಲಾ ಖಾಝಿ ತ್ವಾಕ ಅಹ್ಮದ್ ಮುಸ್ಲಿಯಾರ್ ಅವರನ್ನು ದುಷ್ಕರ್ಮಿಗಳು ಕೊಲೆಗೆಯತ್ನಿಸಿದ್ದಾರೆಂದು ಆರೋಪಿಸಿ ಖಾಝಿ ಮಂಗಳೂರು ಪೊಲೀಸ್ ಆಯುಕ್ತರಿಗೆ ದೂರು ದಾಖಲಿಸಿದ್ದಾರೆ.
ಮಂಗಳೂರಿನ ನಿಕಟ ಪೂರ್ವ ಖಾಝಿಯಾಗಿದ್ದ ಚೆಂಬರಿಕ ಸಿ.ಎಂ.ಅಬ್ದುಲ್ಲಾ ಮುಸ್ಲಿಯಾರ್‌ರ ನಿಗೂಢ ಮರಣಕ್ಕೆ ಸಂಬಂಧಿಸಿ ಅಲ್ಲಲ್ಲಿ ನಡೆಯುವ ಪ್ರತಿಭಟನೆಯಲ್ಲಿ ತ್ವಾಕ ಅಹ್ಮದ್ ಮುಸ್ಲಿಯಾರ್ ಭಾಗವಹಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಖಾಝಿಗೆ ವಿದೇಶದಿಂದ ಕರೆಗಳು ಬಂದಿದ್ದು ಕೊಲೆ ಬೆದರಿಕೆ ಒಡ್ಡಿರುವ ಬಗ್ಗೆ ದೂರಿನಲ್ಲಿ ತಿಳಿಸಲಾಗಿದೆ. ಅಲ್ಲದೆ ಈ ಹಿಂದೆ ಎರಡು ಬಾರಿ ತನ್ನ ಕೊಲೆಗೆ ವಿಫಲ ಯತ್ನ ನಡೆದಿದೆ ಎಂದು ಅವರು ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಸೂಕ್ತ ತನಿಖೆ ಮಾಡುವಂತೆ ಅವರು ದೂರಿನಲ್ಲಿ ತಿಳಿಸಿದ್ದಾರೆ.
ಸೂಕ್ತ ತನಿಖೆಗೆ ಯು.ಟಿ.ಖಾದರ್ ಆಗ್ರಹ
ಖಾಝಿ ಕೊಲೆ ಬೆದರಿಕೆ ಪ್ರಕರಣವನ್ನು ಪೊಲೀಸರು ಕೂಲಂಕುಷವಾಗಿ ತನಿಖೆ ಮಾಡಬೇಕು ಮತ್ತು ಅದರ ಹಿಂದಿನವರನ್ನು ಬಹಿರಂಗಪಡಿಸಬೇಕು ಎಂದು ಮಾಜಿ ಸಚಿವ ಹಾಗೂ ಉಳ್ಳಾಲ ಶಾಸಕ ಯು.ಟಿ.ಖಾದರ್ ಹೇಳಿದರು. ಅವರು ಗುರುವಾರ ಮಾಧ್ಯಮಗಳೊಂದಿಗೆ ಮಾತನಾಡಿ ನನಗೆ ಜೀವ ಬೆದರಿಕೆ ಬಂದಾಗಲೂ ಪೊಲೀಸರು ಭದ್ರತೆ ಒದಗಿಸಿದ್ದರೂ ನಾನು ಅವರನ್ನು ವಾಪಸ್ ಕಳುಹಿಸಿದ್ದೆ. ಆದರೆ ಖಾಜಿಯನ್ನು ಕರೆದು ಜೀವ ಬೆದರಿಕೆ ಹಾಕಿದವರಿಗೆ ಶಿಕ್ಷೆಯಾಗಬೇಕು ’’ಎಂದು ಹೇಳಿದರು.
ಸರ್ಕಾರ ಮತ್ತು ಪೊಲೀಸ್ ಇಲಾಖೆ ಖಾಜಿಯ ಜೀವ ಬೆದರಿಕೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ಯಾರು, ಯಾವಾಗ ಮತ್ತು ಏಕೆ ಅವರು ಜೀವ ಬೆದರಿಕೆ ನೀಡಿದ್ದಾರೆ ಎಂಬುದನ್ನು ಪೊಲೀಸರು ಕಂಡುಹಿಡಿಯಬೇಕು. ಸಮಾಜ ವಿರೋಧಿ ಅಥವಾ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಯಾರಿಗಾದರೂ ಶಿಕ್ಷೆಯಾಗಬೇಕು. ಅಪರಾಧಿಗಳಿಗೆ ಸರ್ಕಾರವು ಮೃದು ಧೋರಣೆ ಯಾಕೆ ಹೊಂದಿಗೆ? ಅಪರಾಧಗಳಲ್ಲಿ ಭಾಗಿಯಾಗಿರುವವರ ವಿರುದ್ಧ ಪೊಲೀಸ್ ಇಲಾಖೆ ಸಹ ಕಠಿಣ ಕ್ರಮ ಕೈಗೊಳ್ಳಬೇಕು ’’.
‘‘ಮಂಗಳೂರು ಹಿಂಸಾಚಾರದಲ್ಲಿ ನಾವು ನ್ಯಾಯಾಂಗ ವಿಚಾರಣೆಗೆ ಕೇಳಿದ್ದೆವು ಏಕೆಂದರೆ ಸಿಐಡಿ ತನಿಖೆಯನ್ನು ಪೊಲೀಸರು ಸ್ವತಃ ಮಾಡುತ್ತಾರೆ ಮತ್ತು ಜನರು ಅವರನ್ನು ನಂಬುವುದಿಲ್ಲ. ಮಂಗಳೂರು ಹಿಂಸಾಚಾರ ಪ್ರಕರಣವನ್ನು ನ್ಯಾಯಾಂಗ ವಿಚಾರಣೆಗೆ ಹಸ್ತಾಂತರಿಸಲು ಸರ್ಕಾರ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳುತ್ತಿಲ್ಲ. ತಮ್ಮನ್ನು ರಕ್ಷಿಸಿಕೊಳ್ಳಲು ಪೊಲೀಸರು ಮೃತರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ, ಇಲ್ಲದಿದ್ದರೆ ಪೊಲೀಸರು ಅಮಾಯಕರನ್ನು ಕೊಂದಿದ್ದಾರೆ ಎಂಬುದು ಸಾಬೀತಾಗುತ್ತದೆ. ಅಪರಾಧದಲ್ಲಿ ಭಾಗಿಯಾದವರಿಗೆ ಶಿಕ್ಷೆಯಾಗಬೇಕು ಎಂದರು ’’.