ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಅವಘಡ ➤➤ ಪತ್ನಿಯನ್ನು ರಕ್ಷಿಸಿದ್ದ ಪತಿ ಮೃತ್ಯು

(ನ್ಯೂಸ್ ಕಡಬ) newskadaba.com, ದುಬೈ . ಫೆ.17. ಕಳೆದ ವಾರ ಅಬುಧಾಬಿಯಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಸಂಭವಿಸಿದ್ದ ಬೆಂಕಿ ಅವಘಡದಲ್ಲಿ ಹೆಂಡತಿಯನ್ನು ರಕ್ಷಿಸಲು ಹೋಗಿ ಗಾಯಗೊಂಡಿದ್ದ ಪತಿ ಮೃತಪಟ್ಟಿದ್ದಾರೆ. ಕೇರಳ ಮೂಲದ ಅಬುಧಾಬಿ ನಿವಾಸಿ ಅನಿಲ್ ನಿನಾನ್ ತಮ್ಮ ಪತ್ನಿಯನ್ನು ಬೆಂಕಿಯಿಂದ ರಕ್ಷಿಸಲು ಹೋದಾಗ ಗಾಯಗೊಂಡಿದ್ದರು. ಸದ್ಯ ನಿನಾನ್ ಅವರ ಪತ್ನಿಯ ಸ್ಥಿತಿ ಸುಧಾರಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಶಾರ್ಟ್ ಸಕ್ರ್ಯೂಟ್ನಿಂದ ಬೆಂಕಿ ಅವಘಡ ಸಂಭವಿಸಿತ್ತು.


ಅಲ್ಲಿ ನಡೆದ ಅವಘಡದ ಬಗ್ಗೆ ನಮಗೆ ಪೂರ್ಣ ಮಾಹಿತಿ ಇಲ್ಲ. ಕಾರಿಡಾರ್ ನಲ್ಲಿ ನಿಂತಿದ್ದ ನೀನೂ ಅವರಿಗೆ ಬೆಂಕಿ ತಗುಲಿದ್ದು, ಬೆಡ್ ರೂಂನಲ್ಲಿದ್ದ ಅನಿಲ್ ಆಕೆಯನ್ನು ರಕ್ಷಿಸಿಲು ಹೋಗಿದ್ದಾರೆ. ಆಗ ಈತನಿಗೂ ಬೆಂಕಿ ತಗುಲಿದೆ ಎಂದು ಅಲ್ಲಿನ ಮೂಲಗಳು ತಿಳಿಸಿದೆ. ದಂಪತಿಗೆ 4 ವರ್ಷದ ಮಗನಿದ್ದಾನೆ.

Also Read  ಬೆಳ್ತಂಗಡಿ: ತಂದೆಯನ್ನೆ ಹತ್ಯೆಗೈದ ಪಾಪಿ ಪುತ್ರ

error: Content is protected !!
Scroll to Top