ಬೈಂದೂರು: ಕೊಳವೆ ಬಾವಿ ಕೊರೆಯುತ್ತಿದ್ದ ವೇಳೆ ಭೂ ಕುಸಿತ: 15ಅಡಿ ಅಳದಲ್ಲಿ ಸಿಲುಕಿದ ವ್ಯಕ್ತಿ

  • ರಕ್ಷಣಾ ಕಾರ್ಯ ಬಿರುಸು

ಬೈಂದೂರು, ಫೆ.16: ಕೊಳೆವೆ ಬಾವಿ ಕೊರೆಯುತ್ತಿದ್ದ ವೇಳೆ ಉಂಟಾದ ಭೂ ಕುಸಿತದಲ್ಲಿ ವ್ಯಕ್ತಿಯೋರ್ವ ಸಿಲುಕಿರುವ ಘಟನೆ ಬೈಂದೂರು ತಾಲೂಕಿನ ಮರವಂತೆಯಲ್ಲಿ ರವಿವಾರ ನಡೆದಿದೆ.

ಸ್ಥಳೀಯ ನಿವಾಸಿ ಸುಬ್ಬಾ ಖಾರ್ವಿಯ ಮಗ ರೋಹಿತ್ ಭೂ ಕುಸಿತದಲ್ಲಿ ಸಿಲುಕಿರುವ ವ್ಯಕ್ತಿ. ಕೊಳವೆಬಾವಿ ಕೊರೆಯುತ್ತಿದ್ದ ಸಂದರ್ಭ ಇದ್ದಕ್ಕಿದ್ದಂತೆ ಅದರ ಸುತ್ತ ಭಾರೀ ಆಳಕ್ಕೆ ಭೂ ಕುಸಿತ ಉಂಟಾಗಿದೆ. ಈ ಸಂದರ್ಭ ಸುಮಾರು 15 ಅಡಿಯಷ್ಟು ಮಣ್ಣು ಕುಸಿದಿದ್ದು, ಸ್ಥಳದಲ್ಲಿದ್ದ ರೋಹಿತ್ ಖಾರ್ವಿ ಅದರಲ್ಲಿ ಸಿಲುಕಿಕೊಂಡಿದ್ದಾರೆ. ಅವರ ರಕ್ಷಣಾ ಕಾಯಾಚರಣೆ ನಡೆಯುತ್ತಿದೆ.

Also Read  ಶಾಲೆಗಳ ಪುನಾರಂಭಕ್ಕೆ ಡೇಟ್‌ ಫಿಕ್ಸ್ ➤ ಜುಲೈ 1ರಿಂದ ರೀಓಪನ್‌

ಈ ಮಧ್ಯೆ ರೋಹಿತ್ ಖಾರ್ವಿ ಸುರಕ್ಷಿತವಾಗಿದ್ದು, 15 ಅಡಿ ಆಳದಿಂದ ರಕ್ಷಣಾ ಕಾರ್ಯಾಚರಣೆ ಸಿಬ್ಬಂದಿಯೊಂದಿಗೆ ಮಾತನಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.
ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ, ವೈದ್ಯರು ಆಗಮಿಸಿದ್ದಾರೆ. ಸ್ಥಳೀಯರು ಕೂಡಾ ರಕ್ಷಣಾ ಕಾರ್ಯಾಚರಣೆಯಲ್ಲಿ ಕೈಜೋಡಿಸಿದ್ದಾರೆ. ಘಟನಾ ಸ್ಥಳದಲ್ಲಿ ಹೆಚ್ಚು ಮಣ್ಣು ಕುಸಿಯದಂತೆ ಡ್ರಮ್‌ಗಳನ್ನು ಅಳವಡಿಸಲಾಗಿದೆ. ರಕ್ಷಣೆಗೆ ಜೆಸಿಬಿಯನ್ನು ಬಳಸಲಾಗಿದೆ.

error: Content is protected !!
Scroll to Top