ಶೀಘ್ರದಲ್ಲೇ ಏರಿಕೆ ಆಗಲಿದೆ ಅಕ್ಕಿಯ ಬೆಲೆ ► ಕಾರಣವೇನೆಂದು ತಿಳಿಯಬೇಕೇ…??

(ನ್ಯೂಸ್ ಕಡಬ) newskadaba.com ಬಳ್ಳಾರಿ, ಆ.26. ದಿನಬಳಕೆ ವಸ್ತುಗಳ ಬೆಲೆಯು ದಿನೇ ದಿನೇ ಗಗನಕ್ಕೇರುತ್ತಿದ್ದು, ಮುಂದಿನ ದಿನಗಳಲ್ಲಿ ಅಕ್ಕಿಯ ಬೆಲೆಯೂ ಏರಿಕೆಯಾಗುವ ಭೀತಿ ಶುರುವಾಗಿದೆ.

ಭತ್ತದ ನಾಡು ಎಂದು ಪ್ರಸಿದ್ಧಿ ಪಡೆದಿರುವ ಬಳ್ಳಾರಿ, ಕೊಪ್ಪಳ, ರಾಯಚೂರು ಜಿಲ್ಲೆಗಳಲ್ಲಿ ತುಂಗಭದ್ರಾ ಜಲಾಶಯದಿಂದ ಭತ್ತದ ಬೆಳೆಗೆ ನೀರು ಸಿಗದ ಪರಿಣಾಮ ಸಾವಿರ ಕೋಟಿ ರೂಪಾಯಿಗೂ ಅಧಿಕ ವಹಿವಾಟಿನ ಭತ್ತದ ಇಳುವರಿ ಕುಂಠಿತಗೊಂಡಿದ್ದು, ಭತ್ತದ ಬೆಳೆಗೆ ಬರ ಬಂದಿದೆ. ಪ್ರಸಕ್ತ ವರ್ಷದ ಬರಗಾಲ ಮತ್ತು ತುಂಗಭದ್ರಾ ಜಲಾಶಯದಿಂದ ರೈತರಿಗೆ ನೀರು ಸಿಗದ ಪರಿಣಾಮ ಈ ಬಾರಿ ಬಳ್ಳಾರಿ ಕೊಪ್ಪಳ ರಾಯಚೂರು ಜಿಲ್ಲೆಗಳ ಸುಮಾರು 6 ಲಕ್ಷ ಹೆಕ್ಟರ್ ಪ್ರದೇಶದಲ್ಲಿ ಭತ್ತದ ಇಳುವರಿ ಇಲ್ಲದಾಗಿದೆ. ಬಳ್ಳಾರಿ ಜಿಲ್ಲೆಯೊಂದರಲ್ಲೇ 80 ಸಾವಿರ ಹೆಕ್ಟರ್ ಪ್ರದೇಶದಲ್ಲಿ ಭತ್ತ ನಾಟಿ ಮಾಡದ ಕಾರಣ ಮುಂದಿನ ವರ್ಷ ಮಾರುಕಟ್ಟೆಯಲ್ಲಿ ಅಕ್ಕಿಯ ಬೆಲೆ ಗಗನಕ್ಕೇರುವುದು ಖಚಿತವಾಗಿದೆ.

Also Read  ಕಿಡ್ನಾಪ್ ಮಾಡಿ 5 ಲಕ್ಷ ರೂ. ಬೇಡಿಕೆ ಇಟ್ಟಿದ್ದಾರೆಂದು ತಂದೆ-ತಾಯಿಗೆ ವಂಚನೆ ➤ "ಇದು ಪೋಷಕರ ಹಣ ಲಪಟಾಯಿಸುವ ನಾಟಕ" ಎಂದ ಮಗ..!!!!

error: Content is protected !!
Scroll to Top