ದ.ಕ ಜಿಲ್ಲಾ ವಕ್ಫ್ ಸಲಹಾ ಸಮಿತಿಗೆ ನೇಮಕ

(ನ್ಯೂಸ್ ಕಡಬ) newskadaba.com, ಮಂಗಳೂರು, ಜ.23    ದಕ್ಷಿಣ ಕನ್ನಡ ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷರಾಗಿ ಅಬ್ದುಲ್ ಅಝೀಝ್ ಕೃಷ್ಣಾಪುರ ಅವರನ್ನು ನೇಮಕಗೊಳಿಸಿ ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಆದೇಶಿಸಿದೆ.


ಉಪಧ್ಯಾಕ್ಷರಾಗಿ ಎ.ಕೆ ಜಮಾಲುದ್ದೀನ್, ಟಿ.ಎ ಶಾನವಾಜ್, ಸದಸ್ಯರಾಗಿ ಮುತ್ತಲಿಬ್, ಎಂ ರಝಾಕ್, ಶಂಶುದ್ಧೀನ್ ಜೋಕಟ್ಟೆ, ಜುಬೈರ್, ಇಬ್ರಾಹಿಂ, ಮಹಮ್ಮದ್ ಶರೀಫ್, ಎಂ ಸಲೀಂ, ಅರ್ಶದ್ ಸಬಹಿ, ಅಬ್ದುಲ್ ಕುಂಞ ನೇಲಡ್ಕ, ಇಸ್ಮಾಯಿಲ್ ಕಾನಾವು, ಮಹಮ್ಮದ್ ಅಶ್ರಫ್ ಅವರನ್ನು ನೇಮಿಸಲಾಗಿದೆ. ಅಬ್ದುಲ್ ಅಝೀಝ್ ಕೃಷ್ಣಾಪುರ ಅವರು ಬುಧವಾರ ಜಿಲ್ಲಾ ವಕ್ಫ್ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದರು.

Also Read  ಸ್ಕೂಟರ್- ಕಾರು ಡಿಕ್ಕಿ ➤ಯುವಕ ಸ್ಥಳದಲ್ಲೇ ಮೃತ್ಯು

error: Content is protected !!
Scroll to Top