Breaking news ದೇರಳಕಟ್ಟೆ: ಅಟೊ ಮೊಬೈಲ್ ಅಂಗಡಿಗೆ ಬೆಂಕಿ

ದೇರಳಕಟ್ಟೆ, ಜ.17: ಅಟೋ ಮೊಬೈಲ್‌ ಅಂಗಡಿಯೊಂದಕ್ಕೆ ಬೆಂಕಿ ಹತ್ತಿಕೊಂಡಿರುವ ಘಟನೆ ಶುಕ್ರವಾರ ಮುಂಜಾನೆ ದೇರಳಕಟ್ಟೆಯಲ್ಲಿ ನಡೆದಿದೆ. ಕಿಡಿಗೇಡಿಗಳು ಬೆಂಕಿ ಹಚ್ಚಿರಬಹುದು ಎಂದು ಶಂಕಿಸಲಾಗಿದೆ.

ದೇರಳಕಟ್ಟೆಯ ವಿದ್ಯಾರತ್ನ ಕ್ರಾಸ್‌ನಲ್ಲಿರುವ ಭಾರತ್ ಅಟೋ ಮೊಬೈಲ್ ಅಂಗಡಿಗೆ ಬೆಂಕಿ ಹಚ್ಚಲಾಗಿದ್ದು ಲಕ್ಷಾಂತರ ರೂ ನಷ್ಟ ಅಂದಾಜಿಸಲಾಗಿದೆ.  ಸ್ಥಳಕ್ಕೆ ಪೊಲೀಸರು ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ.

ಎರಡು ದಿನಗಳ ಹಿಂದೆ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆದ ಪ್ರತಿಭಟನೆಗೆ ತರಲಾಗಿದ್ದ ಲಾರಿ ಹಾಗೂ ಅದರಲ್ಲಿದ್ದ ಕುರ್ಚಿಗಳಿಗೆ ಬೆಂಕಿ ಹಚ್ಚಲಾಗಿತ್ತು. ಈ ಘಟನೆಯಿಂದಾಗಿ ಕುರ್ಚಿಯೊಂದಿಗೆ ಲಾರಿ ಕೂಡಾ ಸುಟ್ಟು ಹೋಗಿತ್ತು.

Also Read  ➤➤ Breaking news ಕಡಬದಲ್ಲಿ ಲಾಠಿ ಚಾರ್ಜ್ ➤ ಪೇಟೆಗೆ ಬಂದಿದ್ದವರಿಗೆ ಲಾಠಿಯ ಬಿಸಿ ಮುಟ್ಟಿದ ಕಡಬಪೊಲೀಸರು

 

error: Content is protected !!
Scroll to Top