ಪೆಟ್ರೋಲ್, ಡಿಸೇಲ್ ಬೆಲೆಯಲ್ಲಿ ಕೊಂಚ ಇಳಿಕೆ

ಬೆಂಗಳೂರು, ಜ.16: ಪೆಟ್ರೋಲ್‌ ಮತ್ತು ಡೀಸೆಲ್‌ ದರಗಳ ನಿರಂತರ ಏರಿಕೆಯಿಂದ ಕಂಗೆಟ್ಟ ವಾಹನ ಸವಾರರಿಗೆ ಕೊಂಚ ತಾತ್ಕಾಲಿಕ ನಿಟ್ಟುಸಿರು ಎಂಬಂತೆ ಇಳಿಕೆ ಕಂಡು ಬಂದಿದೆ. ಇನ್ನೇನು ಬೆಂಗಳೂರಲ್ಲಿ 80 ರ ಸಮೀಪಕ್ಕೆ ಬರುತ್ತದೆ ಎಂಬಂತಹ ಸಂದರ್ಭದಲ್ಲಿ ಮೂರು ದಿನಗಳಿಂದ ಬೆಲೆ ಇಳಿಕೆಯಾಗಿರುವುದು ಜನರಿಗೆ ಕೊಂಚ ನೆಮ್ಮದಿ ನೀಡಿದೆ. ಬೆಂಗಳೂರಲ್ಲಿ ಪೆಟ್ರೋಲ್‌ ಬೆಲೆ 15 ಪೈಸೆ ಕಡಿಮೆಯಾಗಿದ್ದು, 78.08 ದರ ಇದೆ.

ರಾಷ್ಟ್ರದ ಇತರ ಮಹಾ ನಗರಗಳಲ್ಲೂ ಪೆಟ್ರೋಲ್‌ ದರದಲ್ಲಿ 15-16 ಪೈಸೆ ಇಳಿಕೆ ಕಂಡು ಬಂದಿದೆ. ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ 75.55 ರೂ. ಇದೆ. ಚೆನ್ನೈನಲ್ಲಿ 78.49 ರೂ., ಕೋಲ್ಕತದಲ್ಲಿ 78.14 ರೂ. ಹಾಗೂ ವಾಣಿಜ್ಯ ನಗರಿ ಮುಂಬಯಿನಲ್ಲಿ 81.14 ರೂ. ಇದೆ.
ರಾಷ್ಟ್ರದ ಎಲ್ಲ ಮೆಟ್ರೊ ನಗರಗಳಲ್ಲಿ ಡಿಸೇಲ್ 14 – 15 ಪೈಸೆ ಕಡಿಮೆಯಾಗಿದೆ. ಬೆಂಗಳೂರಿನಲ್ಲಿ ಲೀಟರ್‌ ಒಂದರ ಡೀಸೆಲ್‌ ದರ 71.22 ರೂ., ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ 68.92 ರೂ., ಚೆನ್ನೈನಲ್ಲಿ 72.83 ರೂ., ಕೋಲ್ಕತದಲ್ಲಿ 71.29 ರೂ. ಹಾಗೂ ವಾಣಿಜ್ಯ ನಗರಿ ಮುಂಬೈನಲ್ಲಿ 72.27 ರೂ. ಇದೆ.

Also Read  ಅನೈತಿಕ ಪೊಲೀಸ್ ಗಿರಿ - ಪೊಲೀಸ್ ಸಿಬ್ಬಂದಿ ಮೇಲೆಯೇ ಹಲ್ಲೆ

error: Content is protected !!
Scroll to Top