ಕರಾವಳಿ ಉತ್ಸವ – ಸುಸಜ್ಜಿತ ವಸ್ತುಪ್ರದರ್ಶನ 

(ನ್ಯೂಸ್ ಕಡಬ) newskadaba.com, ಮಂಗಳೂರು, ಜ.15    ಕರಾವಳಿ ಉತ್ಸವ ಈಗಾಗಲೇ ಆರಂಭವಾಗಿದ್ದು, ಉತ್ಸವದ ಪ್ರಧಾನ ಆಕರ್ಷಣೆಯಾಗಿರುವ ವಸ್ತು ಪ್ರದರ್ಶನ ಸಾರ್ವಜನಿಕರನ್ನು ಸೆಳೆಯುತ್ತಿದೆ.

ಮಂಗಳೂರಿನ ಮಂಗಳಾ ಸ್ಟೇಡಿಯಂ ಪಕ್ಕದ ಕರಾವಳಿ ಉತ್ಸವ ಮೈದಾನದಲ್ಲಿ ವಸ್ತುಪ್ರದರ್ಶನ ನಡೆಯುತ್ತಿದ್ದು, ವಿವಿಧ ರೀತಿಯ ವಸ್ತುಪ್ರದರ್ಶನ ಹಾಗೂ ಮಾರಾಟ ನಡೆಯುತ್ತಿದೆ. ಆಹಾರ ಉತ್ಪನ್ನಗಳು, ಗೃಹ ಬಳಕೆ ಸಾಮಾಗ್ರಿಗಳು, ಮಕ್ಕಳ ಆಟಿಕೆ ಸಾಮಾಗ್ರಿಗಳ ಮಾರಾಟ ಪ್ರದರ್ಶನ ನಡೆಯುತ್ತಿದೆ. ಮನೋರಂಜನೆಗೆ ವಿವಿಧ ರೀತಿಯ ಅಮ್ಯೂಸ್‍ಮೆಂಟ್‍ಗಳು, ಮಕ್ಕಳ ಮನರಂಜನೆಯ ತಾಣಗಳು ಕರಾವಳಿ ಉತ್ಸವದಲ್ಲಿ ಆಕರ್ಷಿಸುತ್ತಿವೆ. ಈ ವರ್ಷ ಕರಾವಳಿ ಉತ್ಸವ ವಸ್ತುಪ್ರದರ್ಶನ ಆವರಣವನ್ನು ಜಿಲ್ಲಾಡಳಿತವೇ ನೇರವಾಗಿ ಸಿದ್ಧಪಡಿಸಿದ್ದು, ಎಲ್ಲಾ ರೀತಿಯ ಸೌಲಭ್ಯಗಳನ್ನು ಒಳಗೊಂಡಿದೆ. ಒಳಗೆ ಯಾವುದೇ ರೀತಿಯ ಧೂಳು ಏಳದಂತೆ ನೆಲಕ್ಕೆ ಕಾರ್ಪೆಟ್ ಹಾಸಲಾಗಿದೆ. ವಸ್ತು ಪ್ರದರ್ಶನದ ಒಳಾಂಗಣದಲ್ಲಿ 20×20  ಹಾಗೂ 10×10 ಅಳತೆಯ ವಾಣಿಜ್ಯ ಉದ್ದೇಶದ ಕೆಲವು ಅಂಗಡಿ/ಸ್ಟಾಲ್‍ಗಳು ಇನ್ನೂ ಲಭ್ಯವಿದೆ. ಆಸಕ್ತರು ಇದರ ಉಪಯೋಗವನ್ನು ಪಡೆಯಬಹುದು. ಹೆಚ್ಚಿನ ಮಾಹಿತಿಯನ್ನು ಮಂಗಳೂರು ಮಹಾನಗರಪಾಲಿಕೆ ಕಚೇರಿಯಿಂದ ಪಡೆಯಬಹುದು ಎಂದು ಪ್ರಕಟಣೆ ತಿಳಿಸಿದೆ.

error: Content is protected !!

Join the Group

Join WhatsApp Group