ಮೂಡುಬಿದಿರೆ: ಬಸ್ ಢಿಕ್ಕಿ ಹೊಡೆದು ಯುವ ವೈದ್ಯ ಮೃತ್ಯು

ಮೂಡಬಿದಿರೆ, ಜ.13: ಬೈಕ್‌‌‌‌‌ಗೆ ಬಸ್ಸೊಂದು ಢಿಕ್ಕಿ ಹೊಡೆದ ಪರಿಣಾಮ ಯುವ ವೈದ್ಯರೊಬ್ಬರು ಮೃತಪಟ್ಟ ಘಟನೆ ಕೆಸರ್‌ಗದ್ದೆ ಬಳಿ ನಡೆದಿದೆ.

ಮೃತಪಟ್ಟವರನ್ನು ಕೇರಳದ ಕೊಲ್ಲಂ ಮೂಲದ ಡಾ.ಕೃಷ್ಣಾನಂದ(24) ಎಂದು ಗುರುತಿಸಲಾಗಿದೆ.

ಆಳ್ವಾಸ್‌ ಆಯುರ್ವೇದ ಮೆಡಿಕಲ್‌ ಕಾಲೇಜಿನಲ್ಲಿ ಇಂಟರ್ನ್‌ಶಿಪ್‌ ನಡೆಸುತ್ತಿದ್ದ ಕೃಷ್ಣಾನಂದ ಅವರು ಭಾನುವಾರ ಬೆಳಗ್ಗೆ ಕಾರ್ಕಳದಲ್ಲಿ ವೈದ್ಯಕೀಯ ಶಿಬಿರದಲ್ಲಿ ಪಾಲ್ಗೊಳ್ಳಲು ಮೂಡಬಿದಿರೆಯಿಂದ ಬೈಕ್‌ನಲ್ಲಿ ಹೊರಟಿದ್ದರು. ಈ ವೇಳೆ ಕೆಸರ್‌ಗದ್ದೆ ಬಳಿ ಖಾಸಗಿ ಎಕ್ಸ್‌ಪ್ರೆಸ್‌ ಬಸ್ ಓವರ್‌ ಟೇಕ್‌ ಮಾಡುವ ಸಂದರ್ಭ ಬೈಕ್‌ಗೆ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ.

Also Read  ದಕ್ಷಿಣ ಕನ್ನಡ: 17 ಅಭ್ಯರ್ಥಿಗಳಿಂದ 18 ನಾಮಪತ್ರ ಸಲ್ಲಿಕೆ

ಢಿಕ್ಕಿ ಹೊಡೆದ ವೇಳೆ ರಸ್ತೆಗೆ ಬಿದ್ದ ಬೈಕ್‌ ಸವಾರನ ತಲೆಯ ಮೇಲೆ ಬಸ್‌ನ ಹಿಂಬದಿ ಚಕ್ರ ಚಲಿಸಿ ಸ್ಥಳದಲ್ಲೇ ಕೃಷ್ಣಾನಂದ ಅವರು ಮೃತಪಟ್ಟರೆನ್ನಲಾಗಿದೆ. ಬಸ್‌ ಚಾಲಕನ ವಿರುದ್ದ ಮೂಡಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

 

error: Content is protected !!
Scroll to Top