ದಾರುನ್ನೂರು ದುಬೈ ಸಮಿತಿ ಅಧ್ಯಕ್ಷರಾಗಿ ರಫೀಕ್ ಆತೂರ್ ಪುನರಾಯ್ಕೆ,ಪ್ರ.ಕಾರ್ಯದರ್ಶಿಯಾಗಿ ಶಬೀರ್ ಫರಂಗಿಪೇಟೆ

(ನ್ಯೂಸ್ ಕಡಬ) newskadaba.com, ದುಬೈ, ಜ.10  ದಾರುನ್ನೂರು ದುಬೈ ಸಮಿತಿ ಮಾಸಿಕ ಸಭೆಯು ದಿನಾಂಕ 27-12-2019 ನೇ ಶುಕ್ರವಾರ ಜುಮಾ ನಮಾಜಿನ ಬಳಿಕ ದೇರಾ ದುಬೈ ಯಲ್ಲಿರುವ ಹೋಟೆಲ್ ವೇವ್ ಇಂಟೆರ್ ನ್ಯಾಷನಲ್ ಸಭಾಂಗಣದಲ್ಲಿ ಜರುಗಿತು. ಕಾರ್ಯಕ್ರಮ ದ ಅಧ್ಯಕ್ಷ ಸ್ಥಾನವನ್ನು ದಾರುನ್ನೂರ್ ದುಬೈ ಸ್ಟೇಟ್ ಸಮಿತಿ ಅಧ್ಯಕ್ಷ ರಾದ ಜನಾಬ್ ರಫೀಕ್ ಆತೂರ್ ವಹಿಸಿದ್ದರು . ಬಹುಮಾನ್ಯ ಸುಲೈಮಾನ್ ಮೌಲವಿ ಕಲ್ಲೆಗ ಅವರ ದುವಾದ ಮೂಲಕ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಸಭಿಕರನ್ನು ಅತಿಥಿ ಗಳನ್ನು ಸ್ವಾಗತಿಸಿದ ಅಶ್ರಫ್ ಪರ್ಲಡ್ಕ ರವರು ಸಂಘಟನಾತ್ಮಕ ಚಟುವಟಿಕೆಗಲ್ಲಿ ತಮ್ಮನ್ನು ತಾವೇ ತೊಡಗಿಸಿಕೊಂಡು ಸಮುದಾಯದಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ತಮ್ಮ ಕೈಲಾದ ಸಹಾಯ ಸಹಕಾರಗಳನ್ನು ಮಾಡಿ ಅವರನ್ನು ಮುಂದಿನ ತಲೆಮಾರಿಗೆ ಉಪಯುಕ್ತವಾಗುವ ರೀತಿಯಲ್ಲಿ ಬೆಳೆಸಿದರೆ ಪರಿಶುದ್ಧ ಇಸ್ಲಾಂ ಧರ್ಮಕ್ಕೆ ಬರುವಂತಹಾ ಕಂಟಕಗಳನ್ನು ಎದುರಿಸಲು ಸಾಧ್ಯ ಎಂದರು. ಎಲ್ಲರೂ ಸ್ಥಾಪನೆಗಳಿಗೆ ತಮ್ಮ ಕೈಲಾದ ಸಹಾಯ ಸಹಕಾರಗಳನ್ನು ನೀಡಬೇಕೆಂದರು. ದಾರುನ್ನೂರು ಅಬುಧಾಬಿ ಸ್ಟೇಟ್ ಸಮಿತಿ ಇದರ ಅಧ್ಯಕ್ಷರಾದ ಜನಾಬ್ ರೌಫ್ ಹಾಜಿ ಯವರು ಮಾತನಾಡಿ ನಮ್ಮ ದೇಶದ ಪರಿಸ್ಥಿತಿ ಮತ್ತು ಅದರಲ್ಲಿ ನಮ್ಮ ಪಾತ್ರ ಹಾಗೂ ಜವಾಬ್ದಾರಿ ಯ ಬಗ್ಗೆ ಮಾತನಾಡಿದರು. ಈ ಸಮಯದಲ್ಲಿ NRC ಯ ಬಗ್ಗೆ ಏನಾದರೂ ಮಾತನಾಡದೆ ಹೋದಲ್ಲಿ ಬಹುಷಃ ಆ ಸಭಾ ಕಾರ್ಯಕ್ರಮವು ಸಂಪೂರ್ಣ ಗೊಳ್ಳದು ಎಂದು ಹೇಳಿ NRC ಯ ಬಗೆಗಿನ ಕೆಲವು ಉಪಯುಕ್ತ ಮಾಹಿತಿ ನೀಡಿ ಅಲ್ಲಾಹನ ಪರಿಶುದ್ಧ ನಾಮದೊಂದಿಗೆ ಸಭಾ ಕಾರ್ಯ ಕ್ರಮವನ್ನು ಔಪಚಾರಿಕವಾಗಿ ಉದ್ಘಾಟಿಸಿದರು. ಬಳಿಕ ದಾರುನ್ನೂರ್ ದುಬೈ ಸ್ಟೇಟ್ ಇದರ ಪ್ರದಾನ ಕಾರ್ಯದರ್ಶಿ ಉಸ್ಮಾನ್ ಕೆಮ್ಮಿಂಜೆ ವಾರ್ಷಿಕ ವರದಿಯನ್ನು ಮಂಡಿಸಿದರು. ಒಂದು ವರ್ಷದಲ್ಲಿ ದಾರುನ್ನೂರ್ ದುಬೈ ಸ್ಟೇಟ್ ನಲ್ಲಿ ನಡೆದ ಕಾರ್ಯಕ್ರಮ ಗಳನ್ನು ಸವಿಸ್ತಾರವಾಗಿ ವಿವರಿಸಿದರು. ಮುಂಬರುವ ದಿನಗಳಲ್ಲಿ ಇದಕ್ಕಿಂತ ಮಿಗಿಲಾದ ಸಹಾಯ ಸಹಕಾರ ಗಳನ್ನು ಕೋರಿದರು. ವಾರ್ಷಿಕ ಲೆಕ್ಕ ಪತ್ರವನ್ನು ದಾರುನ್ನೂರ್
ದುಬೈ ಸ್ಟೇಟ್ ಸಮಿತಿ ಲೆಕ್ಕ ಪರಿಶೋಧಕರಾದ ಸಿರಾಜ್ ಬಿಸಿ ರೋಡ್ ರವರು ಸುಂದರವಾಗಿ ಮಂಡಿಸಿದರು. ವಾರ್ಷಿಕ ಲೆಕ್ಕ ಪತ್ರವನ್ನು ಬಹಳ ಅಚ್ಚು ಕಟ್ಟಾಗಿ ನೆರವೇರಿಸಿದ ನಂತರ ವರದಿ ಮತ್ತು ಲೆಕ್ಕ ಪತ್ರವನ್ನು ಸಭೆಯಲ್ಲಿ ಸರ್ವಾನುಮತದಿಂದ  ಅಂಗೀಕರಿಸಲಾಯಿತು.

Also Read  ಕಂಕಣ ಭಾಗ್ಯ ಕೂಡಿ ಬರದೇ ಇದ್ದರೆ ಹಸ್ತರೇಖೆಯ ಮೂಲಕ ಕಾರಣ ಏನು ಎಂದು ತಿಳಿದುಕೊಳ್ಳಬಹುದು

Nk Kukke

ಕಳೆದ ವರ್ಷ ಹಾಗೂ ಈ ವರ್ಷದ ನಡುವೆ ಇರುವ ಪರ್ಸಂಟೇಜ್ ವ್ಯತ್ಯಸ್ಥಗಳು ಎಲ್ಲರ ಗಮನ ಸೆಳೆಯಿತು. ಬಳಿಕ 2018 -2019 ರ ಬೆಸ್ಟ್ ಪರ್ಫಾರ್ಮರ್ ಯೂನಿಟ್ ಮೊದಲನೇ ಸ್ಥಾನ ಆಗಿ ಅಲ್ಕೋಜ್
ಯೂನಿಟ್, ಎರಡನೇ ಸ್ಥಾನ ದೇರಾ ಯೂನಿಟ್ ಗೆ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. ಪರ್ಫಾರ್ಮೆನ್ಸ್ ಸ್ಮರಣಿಕೆಗಳನ್ನುಎಲ್ಲ ಯೂನಿಟ್ ಗಳಿಗೂ ಈ ಸಂದರ್ಭ ದಲ್ಲಿ ನೀಡಿ ಇನ್ನುಮುಂದೆ ಕೂಡ ಇದಕ್ಕಿಂತ ಹೆಚ್ಚಿನ ಸಹಾಯ ಸಹಕಾರ ಕೊಡಬೇಕೆಂದು ವಿನಂತಿಸಿಕೊಳ್ಳಲಾಯಿತು. ತದನಂತರ ಸಭಾ ಅಧ್ಯಕ್ಷರು ಮಾತಾನಾಡಿ ಸಂಘಟನೆಗಳಿಗೆ ಸಹಾಯ ಸಹಕಾರ ನೀಡುವುದರಿಂದ ನಮಗೆ ಎರಡು ಲೋಕದಲ್ಲಿಯೂ ವಿಜಯಗಳಿಸಲು ಸಾಧ್ಯ ನಾವು ಮಾಡುತ್ತಿರುವ ದೀನಿ ಸೇವೆಗಳು ಅಲ್ಲಾಹನ ಮಾರ್ಗದಲ್ಲಾಗಿರಲಿ, ಖಂಡಿತಾವಾಗಿಯೂ ಅಲ್ಲಾಹನ ಇಷ್ಟ ದಾಸರಲ್ಲಿ ಸೇರಲು ಸಾಧ್ಯ ಎಂದು
ಹೇಳುತ್ತಾ ದೇಶದ ಇಂದಿನ ಪರಿಸ್ಥಿಯ ಬಗ್ಗೆ ಕಳವಳ ವ್ಯಕ್ತ ಪಡಿಸುತ್ತಾ ಮುಸ್ಲಿಮರ ಐಕ್ಯತೆಗೆ , ಅಭಿಮಾನಕ್ಕೆ ದಕ್ಕೆ ಬಾರದಿರಲಿ ಎಂದು ಪ್ರಾರ್ಥಿಸಿದರು. ಬಳಿಕ ಹಾಲಿ ಸ್ಟೇಟ್ ಸಮಿತಿ ಯನ್ನು ಬರ್ಖಾಸ್ತಾ ಮಾಡಿ ನೂತನ ಸಮಿತಿ ರಚಿಸಲು ಅನುವು ಮಾಡಿಕೊಟ್ಟರು ಇದರ ಜವಾಬ್ದಾರಿಯನ್ನು ದಾರುನ್ನೂರ್ ನ್ಯಾಷನಲ್ ಸಮಿತಿ ಜನರಲ್ ಸೆಕ್ರೆಟರಿ ಜನಾಬ್ ಬದ್ರುದ್ದೀನ್ ಹೆಂತಾರ್ ರನ್ನು ಕೇಳಿಕೊಳ್ಳಲಾಯಿತು ಜವಾಬ್ದಾರಿ ಹೊತ್ತು ಮಾತನಾಡಿದ ಬದ್ರುದ್ದೀನ್ ಹೆಂತಾರ್ ರವರು ಇಂದಿನ ಕಾಲದಲ್ಲಿ ಮುಸ್ಲಿಮರು ಐಕ್ಯತೆಯನ್ನು ಕಾಪಾಡಿಕೊಂಡು ನಡೆಯಬೇಕಾಗಿದೆ, ಇಂದು ದೇಶದಲ್ಲಿ ಮುಸ್ಲಿಮರು ಎದುರಿಸುತ್ತಿರುವ NRC ಹಾಗು CAA ಎಂಬ ಭಯಾನಕ ವಿಷಯವನ್ನು ನಾವು ಬಹಳ ಸೀರಿಯಸ್ ಆಗಿ ತೆಗೆದುಕೊಳ್ಳಬೇಕಿದೆ, ಅಂತ್ಯ ದಿನದಲ್ಲಿ ಮುಸ್ಲಿಮರಿಗೆ ಪರಾಜಯವಿದೆ ಯಾವುದನ್ನು ಕಡೆಗಣಿಸದೆ ಎಲ್ಲರು ಒಗ್ಗಟ್ಟಾಗಿ ಪ್ರತಿಭಟಿಸುವ ಆನಿವಾರ್ಯ ಕಾಲ ಘಟ್ಟಫಲ್ಲಿ ನಾವಿದ್ದೇವೆ ಅಲ್ಲಾಹನು ಮುಸ್ಲಿಂ ಉಮ್ಮತ್ತನ್ನು ರಕ್ಷಿಸಲಿ, ಎಂದು ಪ್ರಾರ್ಥಿಸುತ್ತ ದಾರುನ್ನೂರು ದುಬೈ ಸಮಿತಿಗೆ ನೂತನ ಸಮಿತಿ ರಚಿಸಲು ಸಹಕರಿಸಲು ಸಭಿಕರಲ್ಲಿ ಕೇಳಿಕೊಂಡರು. ಅದರಂತೆ ಅಧ್ಯಕ್ಷರಾಗಿ ರಫೀಕ್ ಆತೂರ್ ರವರು ಪುನರಾಯ್ಕೆಗೊಂಡರು ಗೌರವಾಧ್ಯಕ್ಷರಾಗಿ ಸುಲೈಮಾನ್ ಮೌಲವಿ ಕಲ್ಲೆಗ ಪ್ರಧಾನ ಕಾರ್ಯದರ್ಶಿಯಾಗಿ ಶಬೀರ್
ಫರಂಗಿಪೇಟೆ , ಕೋಶಾಧಿಕಾರಿಯಾಗಿ ಹನೀಫ್ ಮೂಡಬಿದ್ರೆ ಇವರನ್ನು ಆರಿಸಲಾಯಿತು.

Also Read  ಮಕ್ಕಳು ನಿಮ್ಮ ಮಾತು ಕೇಳಿದ ಹೋದರೆ ಏನು ಕಾರಣ ಎಂದು ತಿಳಿದುಕೊಳ್ಳಿ

ಅಲ್ಲದೆ ಈ ಕೆಳಕಂಡ ನೂತನ ಸಮಿತಿಯನ್ನು 2019-20 ರ ಅವಧಿಗೆ ಆಯ್ಕೆ ಮಾಡಲಾಯಿತು. ಸಲಹೆಗಾರರು ರಾಗಿ ಸಲೀಂ ಅಲ್ತಾಫ್ ಫರಂಗಿಪೇಟೆ, ಅಶ್ರಫ್ ಖಾನ್, ಸಲಾಂ ಇಚ್ಚಾ, ಷರೀಫ್ ಕಾವು, ನೂರ್ ಮೊಹಮ್ಮದ್, ಹಮೀದ್ ಮುಸ್ಲಿಯಾರ್, ಲತೀಫ್ ಮದರ್ ಇಂಡಿಯಾ, ರಝಕ್ ಪಾತೂರ್, ಬದ್ರುದ್ದೀನ್ ಹೆಂತಾರ್ ಮುಸ್ತಾಕ್ ಕದ್ರಿ. ಗೌರವಾಧ್ಯಕ್ಷರು ಸುಲೈಮಾನ್ ಮೌಲವಿ ಕಲ್ಲೆಗ, ಅಧ್ಯಕ್ಷರು ರಫೀಕ್
ಆತೂರ್, ಉಪಾಧ್ಯಕ್ಷರು ಸಮೀರ್ ಇಬ್ರಾಹಿಂ ಕಲ್ಲಾರೆ, ಉಸ್ಮಾನ್ ಕೆಮ್ಮಿಂಜೆ, ಅನ್ಸಾಫ್ ಪಾತೂರ್, ಅಶ್ರಫ್ ಅರ್ತಿಕೆರೆ, ಅಬ್ಬಾಸ್ ಕೇಕಡೆ, ಖಾದರ್ ಹಾಜಿ ಸಂಪ್ಯ, ಪ್ರದಾನ ಕಾರ್ಯದರ್ಶಿ ಶಬೀರ್ ಫರಂಗಿಪೇಟೆ, ಜೊತೆ ಕಾರ್ಯದರ್ಶಿ ಅಶ್ರಫ್ ಪರ್ಲಡ್ಕ, ಸಿರಾಜ್ ಬಿಸಿ ರೋಡ್ ಆಸೀಫ್ ಮರೀಲ್, ಜಾಬಿರ್ ಬೆಟ್ಟಂಪಾಡಿ, ಕೋಶಾಧಿಕಾರಿ ಹನೀಫ್ ಮೂಡಬಿದ್ರಿ, ಸಂಘಟನಾ ಕಾರ್ಯದರ್ಶಿ -ಹಾರಿಸ್ ಕೊಯಿಲ, ನಾಸಿರ್ ಬಪ್ಪಳಿಗೆ , ಜಾಬಿರ್ ಬಪ್ಪಳಿಗೆ, ಲೆಕ್ಕ ಪರಿಶೋಧಕರು ಅಬ್ದುಲ್ ಲತೀಫ್ ಕೌಡಿಚ್ಚಾರ್ ಇಸ್ಮಾಯಿಲ್, ಸಂಚಾಲಕರು ಶಾಹುಲ್ ಬಿ ಸಿ ರೋಡ್, ಬಷೀರ್ ಕೆಮ್ಮಿಂಜೆ, ಮುಹಮ್ಮದ್
ಮಾಡನ್ನೂರ್, ಉಸ್ಮಾನ್ ಮರೀಲ್, ರಹ್ಮಾನ್ ಪೆರಾಜೆ, ಇಸಾಕ್ ಸಾಲೆತ್ತೋರ್, ರಝಕ್ ಕರಾಯಿ, ಅಝೀಜ್ ಸೊಂಪಾಡಿ, ಅಶ್ರಫ್ ಬಾಂಬಿಲ ಲತೀಫ್ ಅರ್ತಿಕೆರೆ, ತಾಹಿರ್ ಹೆಂತಾರ್, ಯೂನಸ್, ಜಬ್ಬಾರ್ ಕಲ್ಲಡ್ಕ, ಶಫೀಕ್ ಗಡಿಯಾರ, ನಿಜಾಮ್ ತೋಡಾರ್, ಅಝರ್ ಹಂಡೇಲ್, ನವಾಜ್ ಬಿಸಿ ರೋಡ್, ರಫೀಕ್ ಮುಕ್ವೆ, ಇಫ್ತಿಕರ್ ಕಣ್ಣೂರ್, ನವಾಜ್ ಮನಲ್, ಅಬೂಬಕರ್ ಸಿದ್ದೀಕ್.

ಇದರ ಮದ್ಯೆ ಮಜ್ಲೀಸುನ್ನೂರು ಚೇರ್ಮ್ಯಾನ್ ಅಶ್ರಫ್ ಪರ್ಲಡ್ಕ ಹಾಗು ಕಾರ್ಯದರ್ಶಿ ಉಸ್ಮಾನ್ ಮರೀಲ್ ಅವರನ್ನು ಕಿರು ಕಾಣಿಕೆ ನೀಡಿ ಗೌರವಿಸಲಾಯಿತು. ನಂತರ ದಾರುನ್ನೂರು ಗೌರವ ಸಲಹೆ ಗಾರರಾದ ಜನಾಬ್ ಸಲೀಂ ಅಲ್ತಾಫ್ ಫರಂಗಿಪೇಟೆ ಅವರು ಮಾತನಾಡಿ ದೇಶದ ಈಗಿನ ಪರಿಸ್ಥಿಯ ಬಗ್ಗೆ ಬೇಸರ ವ್ಯಕ್ತ ಪಡಿಸಿ NRC , CAA , NPR ಬಗ್ಗೆ ವಿವರಣೆಯನ್ನು ನೀಡಿದರು ಹಾಗು ನೂತನವಾಗಿ ರಚಿಸಿದ ದಾರುನ್ನೂರು ದುಬೈ ಸಮಿತಿಗೆ ಶುಭ ಹಾರೈಸಿದರು, ಮುಂದೆ ದಾರುನ್ನೂರು ಯು ಎ ಇ ಸಮಿತಿ ಅಧ್ಯಕ್ಷರಾದ ಶಂಶುದ್ದೀನ್ ಸೂರಲ್ಪಾಡಿ ಮಾತನಾಡಿ ದಾರುನ್ನೂರಿನ ಅಭಿವೃದ್ಧಿಯಲ್ಲಿ ಎಲ್ಲರೂ ಭಾಗಿಯಾಗಿ ಅಲ್ಲಿನ ಖರ್ಚು ವೆಚ್ಚಗಳ ವಿವರಗಳನ್ನು ನೀಡಿ ವರ್ಷ ಕಳೆದಂತೆ ನಮ್ಮ ಜವಾಬ್ದಾರಿಗಳು ಅಧಿಕವಾಗುತ್ತಿದ್ದು , ಖರ್ಚುಗಳು ಸಹಾ ಜಾಸ್ತಿಯಾಗುತ್ತಿದೆ ಆದುದರಿಂದ ಎಲ್ಲರು ತಮ್ಮಲ್ಲಾದ ಸಹಾಯ ಸಹಕಾರ ನೀಡಬೇಕೆಂದು ಕೇಳಿಕೊಂಡರು. ವೇದಿಕೆಯಲ್ಲಿದ್ದ ಅಶ್ರಫ್ ಷಾ ಮಾಂತೂರ್ , ಲತೀಫ್ ಮದರ್ ಇಂಡಿಯಾ ,ಅಶ್ರಫ್ ನಖೀಲ್ ಷರೀಫ್ ಕಾವು , ಹಮೀದ್ ಮುಸ್ಲಿಯಾರ್ ,ನೂರ್ ಮುಹಮ್ಮದ್ ನೀರ್ಕಜೆ , ಅನ್ಸಾಫ್ ಪಾತೂರು , ಮೊದಲಾದವರು ಸಂದರ್ಭಯೋಜಿತವಾಗಿ ಮಾತನಾಡಿ ನೂತನ ಸಮಿತಿಗೆ ಶುಭ ಹಾರೈಸಿದರು, ಯು ಎ ಇ ಸಮಿತಿ ವತಿಯಿಂದ ಸಾಜಿದ್ ಭಜಿಪೆ ರಫೀಕ್ ಸುರತ್ಕಲ್ ರವರು ಅಥಿತಿಯಾಗಿ ಆಗಮಿಸದ್ದರು. ನಂತರ ದಾರುನ್ನೂರು ದುಬೈ ಸಮಿತಿ ಪ್ರಧಾನ ಕಾರ್ಯದರ್ಶಿಯ ವಂದನಾರ್ಪಣೆಯೊಂದಿಗೆ ಮೂರು ಸ್ವಲಾತಿನೊಂದಿಗೆ ಸಭಾಕಾರ್ಯಕ್ರಮವು ಮುಕ್ತಾಯಗೊಂಡಿತು.

Also Read  ಮಣಿಪುರಕ್ಕೆ ಅಕ್ರಮ ಪ್ರವೇಶಿಸಿದ 900 ಕುಕಿ ಉಗ್ರರು: ಭದ್ರತಾ ಸಂಸ್ಥೆ

error: Content is protected !!
Scroll to Top