ಕಲಬುರಗಿ: ಮಕ್ಕಳಿಗೆ ವಿಷ ಕುಡಿಸಿ ಹತ್ಯೆಗೈದ ತಂದೆ

ಕಲಬುರಗಿ, ಡಿ.3: ತನ್ನ ಇಬ್ಬರು ಹೆಣ್ಣು ಮಕ್ಕಳಿಗೆ ತಂದೆಯೋರ್ವ ವಿಷ ಕುಡಿಸಿ ಹತ್ಯೆ ಮಾಡಿರುವ ದಾರುಣ ಘಟನೆ ಗುರುವಾರ ರಾತ್ರಿ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನಲ್ಲಿ ನಡೆದಿದೆ.

ವಿಷ ಸೇವಿಸಿ ಮೃತಪಟ್ಟ ಮಕ್ಕಳನ್ನು ರೋಹಿತಾ (4), ಪರ್ವಿತಾ  (2) ಎಂದು ಗುರುತಿಸಲಾಗಿದೆ. ಸಂಜು ಆಲಿಯಾಸ್ ಕುಮ್ಶೆಟ್ಟಿ ಮಕ್ಕಳನ್ನು ಕೊಲೆಗೈದ ತಂದೆ. ಹೈದರಾಬಾದ್ ನಲ್ಲಿ ಸಂಜು ಕೆಲಸ ಮಾಡುತ್ತಿದ್ದ ಇತ್ತೀಚಿಗೆ ತಾಂಡಾಕ್ಕೆ ಬಂದಿದ್ದ. ಮದ್ಯ ವ್ಯಸನಿಯಾಗಿರುವ ಇವನು ಇಬ್ಬರು ಮಕ್ಕಳನ್ನು ಹೊಲಕ್ಕೆ ಕರೆದೊಯ್ದು ವಿಷಕುಡಿಸಿ ಸಾಯಿಸಿದ್ದಾನೆ ಎನ್ನಲಾಗಿದೆ. ತಾಂಡಾದ ಖೀರುನಾಯಕ ಎಂಬುವರ ಹೊಲದಲ್ಲಿ ಇಬ್ಬರು ಮಕ್ಕಳ ಶವಗಳು ಪತ್ತೆಯಾಗಿದ್ದು, ಸ್ಥಳಕ್ಕೆ ಮಿರಿಯಾಣ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.‌ ಆರೋಪಿ ನಾಪತ್ತೆಯಾಗಿದ್ದಾನೆ. ಆತನ ಬಗೆಗೂ ಅನುಮಾನಗಳಿದ್ದು, ಪತ್ತೆಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.

Also Read  ಪುತ್ತೂರಿನಲ್ಲಿ ಇನ್ಮುಂದೆ ರಿಕ್ಷಾ ಚಾಲಕರಿಗೂ ಹೆಲ್ಮೆಟ್ ಕಡ್ಡಾಯ..?! ► ಹೆಲ್ಮೆಟ್ ಧರಿಸದೆ ರಿಕ್ಷಾ ಚಲಾಯಿಸಿದ ಕಾರಣಕ್ಕೆ ದಂಡ ವಿಧಿಸಿದ ಪೊಲೀಸರು

error: Content is protected !!
Scroll to Top