ಬಂಟ್ವಾಳ: ಆಕಸ್ಮಿಕವಾಗಿ ಬಾವಿಗೆ ಬಿದ್ದು ಯುವಕ ಮೃತ್ಯು

ಬಂಟ್ವಾಳ, ಜ.2: ಯುವಕನೊಬ್ಬ ಆಕಸ್ಮಿಕವಾಗಿ ಬಾವಿಗೆ ಬಿದ್ದು ಮೃತಪಟ್ಟ ಘಟನೆ ವಿಟ್ಲದ ಕೊಳ್ನಾಡು ಗ್ರಾಮದ ಕಾಡುಮಠದಲ್ಲಿ ಬುಧವಾರ ನಡೆದಿದೆ.

ಮೃತ ಪಟ್ಟವರನ್ನು ಕೊಳ್ನಾಡು ಗ್ರಾಮದ ಕಾಡುಮಠ ಜನತಾ ಕಾಲನಿ ನಿವಾಸಿ ಪ್ರಶಾಂತ್ (25)ಎಂದು ಗುರುತಿಸಲಾಗಿದೆ.

ಕೊಡಂಗಾಯಿಯಲ್ಲಿ ನಡೆಯುತ್ತಿದ್ದ ಯಕ್ಷಗಾನ ಬಯಲಾಟಕ್ಕೆ ಸ್ನೇಹಿತರೊಂದಿಗೆ ಹೋಗಿದ್ದು ಮರಳಿ ಬಾರದ ಕಾರಣ ಮನೆಯವರು ಆತಂಕಗೊಂಡು ಬುಧವಾರ ಬೆಳಗ್ಗೆ ಹುಡುಕಾಟ ನಡೆಸಿದಾಗ ಮನೆ ಸಮೀಪದ ಕಾಲು ದಾರಿ ಬದಿಯ ಬಾವಿಯಲ್ಲಿ ಮೃತದೇಹ ಪತ್ತೆಯಾಗಿದೆ.

ಪ್ರಶಾಂತ್‌ ಅವರು ಯಕ್ಷಗಾನ ಮುಗಿಸಿ ಬುಧವಾರ ಬೆಳಿಗ್ಗೆ ಸ್ನೇಹಿತನೊಂದಿಗೆ ಬಂದಿದ್ದು ಬೈಕ್‌ ನಿಲ್ಲಿಸಿ ಮನೆಗ ಹೋಗುತ್ತಿದ್ದ ಸಂದರ್ಭದಲ್ಲಿ ಕಾಳು ಜಾರಿ ಬಾವಿಗೆ ಬಿದ್ದಿರಬೇಕು ಎಂದು ಶಂಕಿಸಲಾಗಿದೆ.

Also Read  “Get your free KMSPico Download Now”

ವಿಟ್ಲ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು ಫ್ರೆಂಡ್ಸ್‌ ವಿಟ್ಲ ಸಂಘಟನೆಯ ಮುರಳೀಧರ ತಂಡದ ಸಂಘಟನೆಯ ಸಹಾಯದಿಂದ ಮೃತದೇಹವನ್ನು ಬಾವಿಯಿಂದ ಮೇಲಕ್ಕೆತ್ತಿದ್ದಾರೆ.

ಈ ಬಗ್ಗೆ ವಿಟ್ಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

 

error: Content is protected !!
Scroll to Top