(ನ್ಯೂಸ್ ಕಡಬ) newskadaba.com, ಮಂಗಳೂರು, ಜ.1 ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಮಂಗಳೂರು ಕಚೇರಿಯ ಡಿ ಗ್ರೂಪ್ ಸಿಬ್ಬಂದಿ ವಿಶ್ವನಾಥ ಡಿ ಅವರು ಇಂದು ಸೇವಾ ನಿವೃತ್ತಿಯಾದ ಪ್ರಯುಕ್ತ ಅವರನ್ನು ಬೀಳ್ಕೊಡಲಾಯಿತು. ಅನಾರೋಗ್ಯ ನಿಮಿತ್ತ ಅವರು ಸ್ವಯಂ ನಿವೃತ್ತಿ ಪಡೆದಿದ್ದಾರೆ.
ಜಿಲ್ಲಾ ವಾರ್ತಾಧಿಕಾರಿ ಬಿ.ಎ ಖಾದರ್ ಷಾ ಹಾಗೂ ಕಚೇರಿಯ ಸಿಬ್ಬಂದಿಗಳು, ಯಕ್ಷಗಾನ ಕಲಾವಿದ ಗಿರೀಶ್ ನಾವಡ ಹಾಗೂ ವಿಶ್ವನಾಥ ಡಿ ಇವರ ಕುಟುಂಬಸ್ಥರು ಉಪಸ್ಥಿತರಿದ್ದರು.