ಹೊಸ ವರ್ಷಾಚರಣೆ: ನಿಯಮ ತಪ್ಪಿದರೆ ಪೊಲೀಸ್ ಕ್ರಮ; ಆಯುಕ್ತರ ಎಚ್ಚರಿಕೆ

ಮಂಗಳೂರು, ಡಿ.31: ಹೊಸ ವರ್ಷಆಚರಣೆ ನೆಪದಲ್ಲಿ ನಿಯಮ ತಪ್ಪಿದರೆ ಮುಲಾಜಿಲ್ಲದೇ ಪೊಲೀಸ್‌ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್‌ ‌ಆಯುಕ್ತ ಡಾ.ಪಿ.ಎಸ್‌. ಹರ್ಷ ಎಚ್ಚರಿಕೆ ನೀಡಿದ್ದಾರೆ.

ಹೊಸ ವರ್ಷ ಸಂಭ್ರಮಾಚರಣೆ ನಡೆಸುವ ಯಾವುದೇ ಹೊಟೇಲ್‌, ರೆಸಾರ್ಟ್‌ಗಳು ಕಡ್ಡಾಯವಾಗಿ ಅರ್ಜಿ ಸಲ್ಲಿಸಿ ಲಿಖಿತ ಪರವಾನಗಿ ಪಡೆಯಬೇಕು, ಹಾಗೆಯೇ ಸಂಭ್ರಮಾಚರಣೆಯನ್ನು 12.5ಕ್ಕೆ ಮುಗಿಸಿ 15 ನಿಮಿಷದಲ್ಲಿ ಸ್ಥಳದಿಂದ ತೆರಳಬೇಕು ಎಂದು ಅವರು ತಿಳಿಸಿದ್ದಾರೆ. ಮದ್ಯಪಾನ ಮಾರಾಟ ಮಾಡುವ ಅಂಗಡಿಗಳು 12.5 ನಿಮಿಷದವರೆಗೆ ಮದ್ಯ ಮಾರಾಟ ಮಾಡಲು ಪರವಾನಗಿ ಪಡೆಯಬೇಕು, ಪರವಾನಗಿ ನೀಡುವ ಇಲಾಖೆಗಳು ಎಲ್ಲಾ ಷರತ್ತುಗಳನ್ನು ಪಾಲಿಸಬೇಕು, ತಪ್ಪಿದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

Also Read  ಮಂಗಳೂರು ಮಹಾನಗರಪಾಲಿಕೆಯ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ನಿಷೇಧ ➤ ಕಾನೂನು ಉಲ್ಲಂಘಿಸಿದರೆ ಲೈಸನ್ಸ್ ರದ್ದು

ಮಹಿಳೆಯರ ಸುರಕ್ಷತೆಗೆ ಯಾವುದೇ ಧಕ್ಕೆಯಾದಲ್ಲಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಹಾಗೂ ಮಹಿಳಾ ಸುರಕ್ಷತಾ ಸಿಬ್ಬಂದಿಯನ್ನು ಕಡ್ಡಾಯವಾಗಿ ನೇಮಿಸಬೇಕು ಎಂದು ತಿಳಿಸಿದ್ದಾರೆ. ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಕಡ್ಡಾಯವಾಗಿ ಸಿಸಿ ಟಿವಿಗಳನ್ನು ಅಳವಡಿಸಬೇಕು ಹಾಗೂ ಅಗತ್ಯ ಬಿದ್ದಲ್ಲಿ ಪೊಲೀಸ್‌ ಇಲಾಖೆ  ಪರವಾನಗಿ ಹಾಗೂ ಸಿಸಿ ಟಿವಿ ದೃಶ್ಯಾವಳಿಗಳನ್ನು ಕೇಳಿದಾಗ ನೀಡಬೇಕು. ಸಂಭ್ರಮಾಚರಣೆ ನಡೆಯುವ ಎಲ್ಲಾ ಸ್ಥಳಗಳಲ್ಲಿ ಅಗತ್ಯ ಮುನ್ನೆಚ್ಚರಿಕೆ ವ್ಯವಸ್ಥೆಗಳನ್ನು ಮಾಡಬೇಕು ಎಂದು ಹೇಳಿದ್ದಾರೆ.

 

error: Content is protected !!