ಮಂಗಳೂರು: ಕಲ್ಲಿನಿಂದ ಜಜ್ಜಿ ಮಹಿಳೆಯ ಬರ್ಬರ ಕೊಲೆ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ‌.15. ಮಹಿಳೆಯೋರ್ವರ ತಲೆಗೆ ಕಲ್ಲು ಹಾಕಿ ಬರ್ಬರವಾಗಿ ಕೊಲೆಗೈದ ಘಟನೆ ನಗರದ ಹೊರವಲಯದ ಶಿಮಂತೂರು ಪರಂಕಿಲ ಎಂಬಲ್ಲಿ ಶನಿವಾರ ರಾತ್ರಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಕೊಲೆಯಾದ ಮಹಿಳೆಯನ್ನು ಶಿಮಂತೂರು ಪರಂಕಿಲ ನಿವಾಸಿ ಶಾರದಾ ಶೆಟ್ಟಿ ಎಂದು ಗುರುತಿಸಲಾಗಿದೆ. ಮಹಿಳೆ ಒಬ್ಬರೇ ಮನೆಯಲ್ಲಿ ಇದ್ದ ವೇಳೆ ಕೊಲೆ ಮಾಡಿ ಮೃತದೇಹವನ್ನು ಎಳೆದು ತಂದು ಬಾವಿಯ ಕಟ್ಟೆಯ ಬಳಿ ಹಾಕಲಾಗಿದೆ. ಮೃತದೇಹದ ತಲೆಗೆ ಕಲ್ಲು ಎತ್ತಿಹಾಕಿದ ರೀತಿ ಭಾಸವಾಗುತ್ತಿದ್ದು, ತಲೆ ಜಜ್ಜಿದ ಸ್ಥಿತಿಯಲ್ಲಿದೆ. ಭಾನುವಾರ ಅಪರಾಹ್ನ ಘಟನೆ ಬೆಳಕಿಗೆ ಬಂದಿದ್ದು, ಪೊಲೀಸರು ಸ್ಥಳಕ್ಕಾಗಮಿಸಿದ್ದಾರೆ. ಚಿನ್ನಾಭರಣ ದರೋಡೆ ಮಾಡುವ ಉದ್ದೇಶದಿಂದ ಈ ಕೃತ್ಯ ನಡೆಸಿರಬಹುದೆಂದು ಶಂಕಿಸಲಾಗಿದೆ. ಪೊಲೀಸ್ ತನಿಖೆಯ ನಂತರವಷ್ಟೇ ಇನ್ನಷ್ಟು ಮಾಹಿತಿ ದೊರಕಬೇಕಿದೆ.

Also Read  ಕಡ್ಯಕೊಣಾಜೆ ➤ ಒಕ್ಕೂಟ ಸದಸ್ಯರಿಂದ ಶ್ರಮದಾನ

 

error: Content is protected !!
Scroll to Top