(ನ್ಯೂಸ್ ಕಡಬ) newskadaba.com ಧಾರವಾಡ, ಡಿ.13. ಗ್ರಾಮ ಪಂಚಾಯತ್ ಸದಸ್ಯೆಯ ಪತಿಯೋರ್ವ ತನ್ನ ಹೆಂಡತಿಯೊಂದಿಗಿದ್ದ ಖಾಸಗಿ ಕ್ಷಣಗಳನ್ನು ವಾಟ್ಸಪ್ ಗ್ರೂಪ್ ಗೆ ಅಪ್ಲೋಡ್ ಮಾಡಿ ಪ್ರಮಾದ ಮಾಡಿಕೊಂಡ ಘಟನೆ ಧಾರವಾಡದಲ್ಲಿ ನಡೆದಿದೆ.
ಧಾರವಾಡ ಜಿಲ್ಲೆಯ ಗ್ರಾಮವೊಂದರ ಪಂಚಾಯತ್ ಸದಸ್ಯೆಯ ಪತಿಯು ತನ್ನ ಪತ್ನಿಯೊಂದಿಗೆ ನಡೆಸಿದ ಕಾಮಕೇಳಿಯ ದೃಶ್ಯವನ್ನು ಧಾರವಾಡ ಜಿಲ್ಲೆಯ ಗ್ರಾಮೀಣ ಭಾಗದ ಪೊಲೀಸರು ರಚಿಸಿದ ವಾಟ್ಸಪ್ ಗ್ರೂಪ್ ಒಂದರಲ್ಲಿ ಶೇರ್ ಮಾಡಿದ್ದಾನೆ. ಈ ಗ್ರೂಪಿನಲ್ಲಿ ಪೊಲೀಸರು ಮಾತ್ರವಲ್ಲದೆ ವಿವಿಧ ನಾಗರಿಕರು ಇದ್ದುದರಿಂದ ವೀಡಿಯೋ ಕ್ಷಣಮಾತ್ರದಲ್ಲಿ ವಿವಿಧ ವಾಟ್ಸಪ್ ಗ್ರೂಪ್ ಗಳಲ್ಲಿ ಶೇರ್ ಆಗಿದೆ. ವೀಡಿಯೋ ಆಕಸ್ಮಿಕವಾಗಿ ಹರಿದಾಡಿದೆಯೋ ಗೊತ್ತಿಲ್ಲ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಮಾತ್ರ ವೈರಲ್ ಆಗುತ್ತಿದೆ.