ಬಂಟ್ವಾಳ: ಗುಡ್ಡೆ ಕುಸಿದು ಮೂವರು ಕಾರ್ಮಿಕರ ಸಾವು

  • ಓರ್ವ ಗಂಭೀರ

ಬಂಟ್ವಾಳ, ಡಿ.7: ಗುಡ್ಡ ಕುಸಿದು ಬಿದ್ದ ಪರಿಣಾಮ ಮೂವರು ಕಾರ್ಮಿಕರು ಮೃತಪಟ್ಟು ಓರ್ವ ಗಂಭೀರ ಗಾಯಗೊಂಡ ಘಟನೆ ವಿಟ್ಲದ ಕನ್ಯಾನ ಸಮೀಪದ ಒಡಿಯೂರು ಎಂಬಲ್ಲಿ ನಡೆದಿದೆ. ಮೃತರನ್ನು ರಮೇಶ್, ಪ್ರಕಾಶ್, ಬಾಳಪ್ಪ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಪ್ರಭಾಕರ್ ಎಂಬವರು ಗಂಭೀರ ಗಾಯಗೊಂಡಿದ್ದು, ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಶ್ರೀ ಕ್ಷೇತ್ರ ಒಡಿಯೂರು ದೇವಸ್ಥಾನಕ್ಕೆ ಸೇರಿದ ಅನ್ನಛತ್ರದ ಕಟ್ಟಡ ಕಾಮಗಾರಿ ನಡೆಯುತ್ತಿತ್ತು.

ಕಟ್ಟಡ ಕಾಮಗಾರಿಗಾಗಿ ಜೆಸಿಬಿ ಹಾಗೂ ಕಾರ್ಮಿಕರ ಮೂಲಕ ಕಾಮಗಾರಿ ನಡೆಸಲಾಗುತ್ತಿತ್ತು. ಆ ಸಂದರ್ಭ ಏಕಾಏಕಿ ಮೇಲ್ಭಾಗದ ಗುಡ್ಡ ಕುಸಿದುಬಿದ್ದಿದೆನ್ನಲಾಗಿದೆ. ಬೃಹತ್ ಗಾತ್ರದಲ್ಲಿ ಮಣ್ಣು ಕುಸಿದಿದ್ದು, ಕೆಳಗಡೆ ಕೆಲಸ ಮಾಡುತ್ತಿದ್ದ ಕಾರ್ಮಿಕರ ಅರಿವಿಗೆ ಬಾರದೆ ಹಾಗೂ ಅಲ್ಲಿಂದ ಓಡಿ ಹೋಗಲಾಗದೆ ಮಣ್ಣಿನಡಿ ಸಿಲುಕಿಕೊಂಡಿದ್ದಾರೆ.

Also Read  ಮಂಗಳೂರು ವಿಶ್ವವಿದ್ಯಾನಿಲಯದ ವಾರ್ಷಿಕ ಘಟಿಕೋತ್ಸವ

ತಕ್ಷಣ ರಕ್ಷಣಾ ಕಾರ್ಯಾಚರಣೆ ನಡೆಸಿದರೂ ಮೂವರು ಮೃತಪಟ್ಟಿದ್ದಾರೆ. ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ವಿಟ್ಲ ಠಾಣಾ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

error: Content is protected !!
Scroll to Top