ಕರಾಟೆಯಲ್ಲಿ ಸನ್ವಿತ್‍ಗೆ ಯಲ್ಲೋ ಬೆಲ್ಟ್

(ನ್ಯೂಸ್ ಕಡಬ) newskadaba.com, ಕಲ್ಲುಗುಡ್ಡೆ, ಡಿ.3  ಮಂಗಳೂರಿನ ಹಂಪನಕಟ್ಟೆ ಮಿಲಾಗ್ರೀಸ್ ವಿದ್ಯಾಸಂಸ್ಥೆಯಲ್ಲಿ ನವೆಂಬರ್ ನಲ್ಲಿ ನಡೆದ ರಾಷ್ಟ್ರಮಟ್ಟದ ಮುಕ್ತ ಕರಾಟೆ ಚಾಂಪಿಯನ್‍ಶಿಪ್ 2019ರ ಸ್ಪರ್ದೆಯಲ್ಲಿ ರೆಂಜಿಲಾಡಿ ಸಾಂತೋಮ್ ವಿದ್ಯಾನಿಕೇತನ್ ಶಾಲೆಯ 6ನೇ ತರಗತಿಯ ವಿದ್ಯಾರ್ಥಿ ಸನ್ವಿತ್ ಎಸ್. ವೈಯಕ್ತಿಕ ಕುಮಿಟೆಯ 11ನೇ ವಯೋಮಾನ ವಿಭಾಗದಲ್ಲಿ ಯಲ್ಲೋ ಬೆಲ್ಟ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.

ಇವರು ರೆಂಜಿಲಾಡಿ ಗ್ರಾಮದ ಸಂಕೇಶ ಪುರುಷೋತ್ತಮ ಹಾಗೂ ವಾರಿಜ ದಂಪತಿ ಪುತ್ರ. ಇವರು ಕರಾಟೆ ಶಿಕ್ಷಕ ಚಂದ್ರಶೇಖರ್ ಸುಳ್ಯ ಇವರಿಂದ ತರಭೇತಿ ಪಡೆದಿರುತ್ತಾರೆ.

Also Read  ಪಾಂಗಾಳ ಸೇತುವೆಯಲ್ಲಿ ಸರಣಿ ಅಪಘಾತ ► ಹಲವರಿಗೆ ಗಾಯ

 

error: Content is protected !!
Scroll to Top