ಕಡಬ: ಕೆಲಸಕ್ಕೆಂದು ತೆರಳಿದ್ದ ಯುವತಿ ನಾಪತ್ತೆ

(ನ್ಯೂಸ್ ಕಡಬ) newskadaba.com ಕಡಬ, ನ.28. ಕೆಲಸಕ್ಕೆಂದು ತೆರಳಿದ್ದ ಕಡಬದ ಯುವತಿಯೋರ್ವಳು ಮನೆಗೆ ಹಿಂತಿರುಗದೆ ನಾಪತ್ತೆಯಾಗಿದ್ದು, ಈ ಬಗ್ಗೆ ಆಕೆಯ ತಾಯಿ ಕಡಬ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ನಾಪತ್ತೆಯಾದ ಯುವತಿಯನ್ನು ಕಡಬ ತಾಲೂಕು ನೂಜಿಬಾಳ್ತಿಲ ಗ್ರಾಮದ ಬೇರಿಕೆ ನಿವಾಸಿ ಮೋನಪ್ಪ ಕುಂಬಾರ ಎಂಬವರ ಪುತ್ರಿ ಕು| ಶ್ವೇತಾ ಎಂದು ಗುರುತಿಸಲಾಗಿದೆ. ಈಕೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ತನಗೆ ಕೆಲಸ‌ ಸಿಕ್ಕಿದೆಯೆಂದು ಹೇಳಿ ಕಳೆದ ಆಗಸ್ಟ್ 12 ರಂದು ಮನೆಯಿಂದ ತೆರಳಿದ್ದು, ಆ ಬಳಿಕ ತಿಂಗಳಲ್ಲಿ ಒಂದು ಸಲ ಕರೆ ಮಾಡಿದ್ದಾಳೆ ಎನ್ನಲಾಗಿದೆ. ಇದೀಗ ಮೊಬೈಲ್ ಸ್ವಿಚ್ ಆಫ್ ಆಗಿದ್ದು, ಮನೆಗೆ ಬಾರದೆ ನಾಪತ್ತೆಯಾಗಿರುವುದಾಗಿ ಆಕೆಯ ತಾಯಿ ಕಡಬ ಠಾಣೆಗೆ ದೂರು ನೀಡಿದ್ದಾರೆ.

Also Read  ಜಿಲ್ಲಾಮಟ್ಟದ ಚಿತ್ರಕಲಾ ಸ್ಪರ್ಧೆ ➤ ಸೈಂಟ್ ಆನ್ಸ್ ಶಾಲೆಯ ಪ್ರಣಮ್ ಸಂಕಡ್ಕ ತೃತೀಯ

error: Content is protected !!
Scroll to Top