ಕಡಬ: ಭಿಕ್ಷಾಟನೆ ಮಾಡಿ ಜೀವನ ಸಾಗಿಸುತ್ತಿದ್ದ ಸತೀಶ್ ಇನ್ನಿಲ್ಲ ➤ ಭಿಕ್ಷಾಟನೆಯ ಮೂಲಕ ಚಿರಪರಿಚಿತ ರಾಗಿದ್ದ ಸತೀಶ್

(ನ್ಯೂಸ್ ಕಡಬ) newskadaba.com ಕಡಬ, ನ.25. ಕಡಬ ಪರಿಸರದಲ್ಲಿ ಭಿಕ್ಷಾಟನೆ ಮಾಡುತ್ತಾ ಜೀವನ ಸಾಗಿಸುತ್ತಿದ್ದ ಸತೀಶ್ ಸೋಮವಾರದಂದು ನಿಧನರಾಗಿದ್ದಾರೆ.

ಮೂಲತಃ ತುಮಕೂರು ನಿವಾಸಿಯಾಗಿದ್ದ ಸತೀಶ್ ಕಡಬದ ಟೋಮ್ ಬಝಾರ್ ಬಳಿ ಏಕಾಂಗಿಯಾಗಿ ವಾಸಿಸುತ್ತಿದ್ದರು. ಕಡಬ ಪರಿಸರದಲ್ಲಿ ಭಿಕ್ಷಾಟನೆ ಮಾಡಿ ಜೀವನ ಸಾಗಿಸುತ್ತಿದ್ದ ಈತ ಸುಮಾರು 10 ವರ್ಷಗಳ ‌ಹಿಂದೆ ಕಡಬಕ್ಕೆ ಆಗಮಿಸಿದ್ದರು. ಈ ಹಿಂದೆ ಈತನ ಮನೆಯವರು ಕಡಬಕ್ಕೆ ಆಗಮಿಸಿ ಕುಶಲೋಪರಿ ವಿಚಾರಿಸಿದ್ದರು. ಸೋಮವಾರದಂದು ನಿಧನರಾದ ಇವರ ಮೃತದೇಹವನ್ನು ಟೋಮ್ ಬಝಾರ್ ಕಟ್ಟಡದ ಮಾಲಕ ತೋಮ್ಸನ್ ರವರ ಮುಂದಾಳತ್ವದಲ್ಲಿ ಕಡಬ ಗ್ರಾಮ ಪಂಚಾಯತ್ ಹಾಗೂ ಪೊಲೀಸರ ಸಹಕಾರದೊಂದಿಗೆ ದಫನ ಮಾಡಲಾಯಿತು.

Also Read  ಕರಗಿತು ಡಿಕೆಶಿ ಸಿಎಂ ಆಗೋ ಕನಸು

error: Content is protected !!
Scroll to Top