(ನ್ಯೂಸ್ ಕಡಬ) newskadaba.com ಪುತ್ತೂರು, ನ.19. ಗ್ರಾಮಾಂತರ ಠಾಣಾ ವ್ಯಾಪ್ತಿಯ ಕುರಿಯ ಗ್ರಾಮದ ಹೊಸಮಾರು ಎಂಬಲ್ಲಿ ಅಜ್ಜ ಹಾಗೂ ಮೊಮ್ಮಗಳನ್ನು ಬರ್ಬರವಾಗಿ ಕೊಲೆಗೈದ ಘಟನೆ ಮಂಗಳವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ.
ಮೃತರನ್ನು ಕುರಿಯ ನಿವಾಸಿಗಳಾದ ಕೊಗ್ಗು ಸಾಹೇಬ್ (65 ) ಮತ್ತು ಅವರ ಮೊಮ್ಮಗಳು 9ನೇ ತರಗತಿಯ ವಿದ್ಯಾರ್ಥಿನಿ ಸಮೀಹ ಬಾನು ಎಂದು ಗುರುತಿಸಲಾಗಿದೆ. ಕೊಗ್ಗು ಸಾಹೇಬರವರ ಪತ್ನಿ ಖದೀಜಾಬಿ ಬಿ. ರವರೂ ಚೂರಿ ಇರಿತಕ್ಕೊಳಗಾಗಿ ಗಂಭೀರ ಗಾಯಗೊಂಡಿದ್ದು ಜೀವನ್ಮರಣ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮನೆಯಲ್ಲಿ ಮೂವರೇ ಇದ್ದುದರಿಂದ ಯಾರು ಕೊಲೆ ಮಾಡಿದರು..? ಯಾಕಾಗಿ ಮಾಡಿದರು ಎಂಬ ಬಗ್ಗೆ ನಿಖರ ಕಾರಣ ತಿಳಿದುಬಂದಿಲ್ಲ.