ಪಾದಚಾರಿಗೆ ಅಪಘಾತ



 (ನ್ಯೂಸ್ ಕಡಬ) newskadaba.com  ಬಂಟ್ವಾಳ  ನ.12  ಪಾದಚಾರಿಗೆ ಮೋಟಾರ್ ಸೈಕಲೊಂದು ಡಿಕ್ಕಿ ಹೊಡೆದು ಗಾಯಗೊಂಡ ಘಟನೆ ಬಂಟ್ವಾಳ ತಾಲೂಕು ಅರಳ ಗ್ರಾಮದ ಸೊರ್ನಾಡು ಎಂಬಲ್ಲಿ ಸೋಮವಾರದಂದು ನಡೆದಿದೆ.







ಶ್ರೀಮತಿ ಸಂತಾನ್ ಬರ್ಬೋಜ್ರವರು ಬಂಟ್ವಾಳಕ್ಕೆ ಬರಲು ವಾಹನಕ್ಕಾಗಿ ಕಾಯುತ್ತಿದ್ದ ಸಮಯ ಮೋಟಾರ್ ಸೈಕಲೊಂದು ರಭಸವಾಗಿ ಡಿಕ್ಕಿ ಹೊಡೆದು ಅಪಘಾತಪಡಿಸಿದ ಪರಿಣಾಮ ಎಡಕೈ ಹಾಗೂ ಬೆನ್ನಿಗೆ ಗಾಯವಾಗಿರುತ್ತದೆ. ಗಾಯಾಳುವನ್ನು ಚಿಕಿತ್ಸೆ ಬಗ್ಗೆ ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿ ಬಂಟ್ವಾಳ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.






error: Content is protected !!
Scroll to Top