ಕುಂತೂರು: ಮಾರ್ ಇವಾನಿಯೋಸ್ ಕಾಲೇಜಿನಲ್ಲಿ ಪ್ರೆಶರ್ಸ್ ಡೇ

(ನ್ಯೂಸ್ ಕಡಬ) newskadaba.com, ಕಡಬ. ನ.05. ಇಲ್ಲಿನ ಮಾರ್ ಇವಾನಿಯೋಸ್ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯದಲ್ಲಿ 2019-20 ನೇ ಸಾಲಿನ
ಹೊಸದಾಗಿ ಸೇರ್ಪಡೆಗೊಂಡ ವಿದ್ಯಾರ್ಥಿ ಶಿಕ್ಷಕರನ್ನು ಸ್ವಾಗತಿಸುವ ಕಾರ್ಯಕ್ರಮವನ್ನು ಏರ್ಪಡಿಸಲಾಯಿತು.

ಹಿರಿಯ ವಿದ್ಯಾರ್ಥಿ ಶಕ್ಷಕರು ಬಹಳ ವೈಶಿಷ್ಟ್ಯ ಪೂರ್ಣವಾಗಿ ನೂತನ ವಿದ್ಯಾರ್ಥಿಗಳನ್ನು ಸ್ವಾಗತಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಸಂಚಾಲಕರಾದ ವಂ|ಫಾ|ಡಾ| ಎಲ್ದೋ ಪುತ್ತನ್ ಕಂಡತ್ತಿಲ್ ವಿದ್ಯಾರ್ಥಿ ಶಿಕ್ಷಕರ ಸರ್ವತೋಮುಖ ಅಭಿವೃದ್ಧಿಗೆ ಸಹಾಯಕವಾಗುವ ಅಂಶಗಳ ಬಗ್ಗೆ ಮಾತನಾಡಿದರು. ಕಾಲೇಜಿನ ಪ್ರಭಾರ ಪ್ರಾಂಶುಪಾಲೆ ಶ್ರೀಮತಿ ಉಷಾ ಎಂ. ಎಲ್, ಕಾರ್ಯಕ್ರಮದ ಸಂಯೋಜಕಿ ಕುಮಾರಿ ತೃಪ್ತಿ ಎಂ, ಹಾಗೂ ಕಾಲೇಜಿನ ಎಲ್ಲಾ ಉಪನ್ಯಾಸಕ ವೃಂದದವರು ಉಪಸ್ಥಿತರಿದ್ದರು. ವಿದ್ಯಾರ್ಥಿ ಶಿಕ್ಷಕಿ ಸಂಧ್ಯಾ ಕೆ.ಕೆ ವಂದಿಸಿ, ಭುವನ ಶಿವರಾಮ್ ಎಲ್ಲರನ್ನು ಸ್ವಾಗತಿಸಿದರು. ತದನಂತರ ಎಲ್ಲಾ ವಿದ್ಯಾರ್ಥಿ ಶಿಕ್ಷಕರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

Also Read  ವಿಟ್ಲ: ಮದುಮಗನಿಂದ ಕೊರಗಜ್ಜನ ವೇಷ ಧರಿಸಿ ಅವಹೇಳನ ಪ್ರಕರಣ ➤ ಇಬ್ಬರ ಬಂಧನ, ಪ್ರಮುಖ ಆರೋಪಿ ಮದುಮಗ ನಾಪತ್ತೆ

error: Content is protected !!
Scroll to Top