ಒಡಹುಟ್ಟಿದ ಅಣ್ಣನಿಂದಲೇ ಮುದ್ದಿನ ತಂಗಿಯ ಕೊಲೆ ➤ ಕಾಲೇಜು ವಿದ್ಯಾರ್ಥಿನಿ ನಾಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್

(ನ್ಯೂಸ್ ಕಡಬ) newskadaba.com ಕೊಣಾಜೆ, ಅ.27. ಕಳೆದೆರಡು ವಾರಗಳ ಹಿಂದೆ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದ ಕೊಣಾಜೆ ಠಾಣಾ ವ್ಯಾಪ್ತಿಯ ಮುಡಿಪು ಬಳಿಯ ನಿವಾಸಿ ಪ್ರಥಮ ಪಿಯುಸಿ ವಿದ್ಯಾರ್ಥಿನಿಯ ನಾಪತ್ತೆ ಪ್ರಕರಣಕ್ಕೆ ಇದೀಗ ಬಿಗ್ ಟ್ವಿಸ್ಟ್ ದೊರೆತಿದ್ದು, ಒಡಹುಟ್ಟಿದ ಅಣ್ಣನೇ ಮುಂದು ತಂಗಿಯನ್ನು ಕೊಲೆಗೈದಿರುವುದಾಗಿ ತನಿಖೆಯ ವೇಳೆ ಬೆಳಕಿಗೆ ಬಂದಿದೆ.

ಮುಡಿಪು ನಿವಾಸಿ ಫ್ರಾನ್ಸಿಸ್ ಕುಟಿನ್ಹಾ ಎಂಬವರ ಪುತ್ರಿ, ಮಂಗಳೂರಿನ ಖಾಸಗಿ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಫಿಯೊನಾ ಸ್ವೀಡಲ್ ಕುಟಿನ್ಹಾ (16) ಅ.08 ರಂದು ಮನೆಯಿಂದಲೇ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಳು. ಮೊಬೈಲ್ ಸ್ವಿಚ್ ಆಫ್ ಅಗಿದ್ದು ಲೊಕೇಶನ್ ಪರಿಶೀಲಿಸಿದಾಗ ಮುಡಿಪುವಿನಲ್ಲಿ ಆಫ್ ಆಗಿರುವುದು ಕಂಡು ಬಂದಿದ್ದು, ಹೆಚ್ಚುವರಿ ಹಣವನ್ನೂ ಕೊಂಡೊಯ್ಯದೆ ನಾಪತ್ತಯಾಗಿರುವುದು ಮನೆಯವರ ಆತಂಕಕ್ಕೆ ಕಾರಣವಾಗಿತ್ತು. ಬಾಲಕಿಯ ಹೆತ್ತವರು ನೀಡಿದ ದೂರಿನಂತೆ ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

Also Read  ಹಿಂದಿ ಶಿಕ್ಷಕರಿಗೆ ಒಂದು ದಿನದ ಕಾರ್ಯಾಗಾರ

ಆದರೆ ನಾಪತ್ತೆಯಾಗುವ ವೇಳೆ ಬಾಲಕಿಯ ಸಹೋದರ ಮನೆಯಲ್ಲಿದ್ದು, ಆತನ ಬಗ್ಗೆ ವಿಚಾರಣೆ ನಡೆಸಿದಾಗ ಕೊಣಾಜೆ ಠಾಣಾ ಪೊಲೀಸರಿಗೆ ತೃಪ್ತಿಕರವಾದ ಉತ್ತರ ಸಿಕ್ಕಿಲ್ಲವಾದರೂ ಶನಿವಾರದಂದು ಹೆಚ್ಚಿನ ವಿಚಾರಣೆಯ ವೇಳೆ ತನ್ನ ಮುದ್ದಿನ ತಂಗಿಯನ್ನು ಕೊಲೆ ಮಾಡಿ ಮನೆಯ ಹಿಂಭಾಗದಲ್ಲಿರುವ ಗುಡ್ಡದಲ್ಲಿ ಎಸೆದಿರುವ ರಹಸ್ಯವನ್ನು ಬಿಚ್ಚಿಟ್ಟಿದ್ದಾನೆ.

ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದ ಬಾಲಕಿಯ ಸಹೋದರ ಸ್ಯಾಮ್ಸನ್‌ ಕುಟಿನ್ಹಾ ಗಾಂಜಾ ವ್ಯಸನಕ್ಕೆ ದಾಸನಾಗಿದ್ದು, ಇದೇ‌ ವಿಚಾರದಲ್ಲಿ ಅಕ್ಟೋಬರ್ 08 ರಂದು ಸಹೋದರಿಯೊಂದಿಗೆ ಜಗಳ ಮಾಡಿದ್ದಾನೆ. ಈ ಸಂದರ್ಭ ಸುತ್ತಿಗೆಯಿಂದ ತಂಗಿಯ ತಲೆಯ ಹಿಂಭಾಗಕ್ಕೆ ಹೊಡೆದಿದ್ದು, ಮೆದುಳಿಗೆ ಗಂಭೀರವಾದ ಗಾಯವಾಗಿ ಬಾಲಕಿ ಮೃತಪಟ್ಟಿದ್ದಳು. ಇದರಿಂದ ಹೆದರಿದ ಆರೋಪಿಯು ಸಹೋದರಿಯ ಮೃತದೇಹವನ್ನು ಎಳೆದೊಯ್ದು ಮನೆಯ ಹಿಂಭಾಗದಲ್ಲಿರುವ ಗುಡ್ಡದಲ್ಲಿ ಎಸೆದಿರುವ ಬಗ್ಗೆ ತನಿಖೆಯ ವೇಳೆ ಬಾಯ್ಬಿಟ್ಟಿದ್ದು, ನಾಪತ್ತೆ ಪ್ರಕರಣಕ್ಕೆ ತೆರೆ ಬಿದ್ದಿದೆ.

Also Read  ಆಟೋ ಚಾಲಕನಿಗೆ ಚೂರಿ ಇರಿತ ➤ ಆರೋಪಿ ಎಸ್ಕೇಪ್

 

error: Content is protected !!
Scroll to Top