ಕುಂತೂರು: ಬೇಕರಿ ಉತ್ಪನ್ನಗಳ ತಯಾರಿಕಾ ಸಂಸ್ಥೆ ‘ಸಿಟಿ ಬೇಕರಿ’ ಶುಭಾರಂಭ

(ನ್ಯೂಸ್ ಕಡಬ) newskadaba.com ಕಡಬ, ಅ.24. ಇಲ್ಲಿಗೆ ಸಮೀಪದ ಆಲಂಕಾರಿನಲ್ಲಿ ಕಳೆದ ಹಲವು ವರ್ಷಗಳಿಂದ ಉತ್ತಮ ಸೇವೆ ನೀಡಿರುವ ‘ಸಿಟಿ ಸ್ವೀಟ್ಸ್’ನ ಬೇಕರಿ ತಿಂಡಿ ತಿನಿಸುಗಳ ನೂತನ ಉತ್ಪಾದನಾ ಕೇಂದ್ರವು ಉಪ್ಪಿನಂಗಡಿ – ಸುಬ್ರಹ್ಮಣ್ಯ ರಾಜ್ಯ ರಸ್ತೆಯ ಕುಂತೂರಿನ ಮಂಜುಶ್ರೀ ಕಾಂಪ್ಲೆಕ್ಸ್ ನಲ್ಲಿ ಗುರುವಾರದಂದು ಶುಭಾರಂಭಗೊಂಡಿತು.

ನೆಲ್ಯಾಡಿ ಬೆಥನಿ ಚರ್ಚ್‌ನ ಪಾಸ್ಟರ್ ಪ್ರಮೋದ್ ನೂತನ ಸಂಸ್ಥೆಯನ್ನು ಉದ್ಘಾಟಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಪಾಸ್ಟರ್ ಮಣಿಕಂಠನ್ ಎರ್ನಾಕುಲಂ ವಳಿಯಪಾರ, ಬ್ರದರ್ ದೇವಸ್ಯ, ಪ್ರಮುಖರಾದ ನಾಗಪ್ಪ ಗೌಡ ಕುಂತೂರು ಉಪಸ್ಥಿತರಿದ್ದರು. ನೂತನ ಸಂಸ್ಥೆಯಲ್ಲಿ ಬೇಕರಿ ಉತ್ಪನ್ನಗಳನ್ನು ಅತೀ ಕಡಿಮೆ ಬೆಲೆಯಲ್ಲಿ ಹೋಲ್ ಸೇಲ್ ಹಾಗೂ ಚಿಲ್ಲರೆಯಾಗಿ ಮಾರಾಟ ಮಾಡಲಾಗುತ್ತಿದ್ದು, ಗ್ರಾಹಕರು ಮುಂಗಡವಾಗಿ ಆರ್ಡರ್ ಕೊಡಲು 9845135598 ಸಂಖ್ಯೆಯನ್ನು ಸಂಪರ್ಕಿಸುವಂತೆ ಸಂಸ್ಥೆಯ ಮಾಲಕರಾದ ತೋಮಸ್ ಪಿ.ಎಂ. ತಿಳಿಸಿದ್ದಾರೆ.

Also Read  ಸವಣೂರು: ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನ ವಾರ್ಷಿಕೋತ್ಸವ

error: Content is protected !!
Scroll to Top