ಪ್ರಾಥಮಿಕ ಶಾಲಾ ವಿಭಾಗದ ತಾಲೂಕು ಮಟ್ಟದ ಕ್ರೀಡಾ ಕೂಟ ಜ್ಞಾನೋದಯ ಬೆಥನಿಗೆ ಅವಳಿ ಸಮಗ್ರ  ಪ್ರಶಸ್ತಿ

 

(ನ್ಯೂಸ್ ಕಡಬ) newskadaba.com ನೆಲ್ಯಾಡಿ ಅ.24. ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ  , ವಿವೇಕಾನಂದ ಕಾಲೇಜು ತೆಂಕಿಲ  ಪುತ್ತೂರು ಇಲ್ಲಿ ಗುರುವಾರ ಮತ್ತು ಶುಕ್ರವಾರ ನಡೆದ  ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಜ್ಞಾನೋದಯ ಬೆಥನಿ ಪಿ ಯು ಕಾಲೇಜಿನ ವಿದ್ಯಾರ್ಥೀಗಳಿಗೆ ಪ್ರಾಥಮಿಕ ಶಾಲಾ ಬಾಲಕರ ವಿಭಾಗ ಮತ್ತು 8ನೇ ತರಗತಿ ಬಾಲಕರ ವಿಭಾಗದಲ್ಲಿ ಅವಳಿ ಸಮಗ್ರ  ಪ್ರಶಸಿಯನ್ನು  ಪಡೆದುಕೊಂಡಿದೆ.

ಪ್ರಾಥಮಿಕ ಬಾಲಕರ ವಿಭಾಗದಲ್ಲಿ  7ನೇ ತರಗತಿ ವಿದ್ಯಾರ್ಥಿ ಸಚಿನ್ ಸಂತೋಷ್ 100ಮೀಟರ್, 200ಮೀಟರ್, ಓಟದಲ್ಲಿ ಪ್ರಥಮ ಸ್ಥಾನ ಪಡೆದು ವೈಯುಕ್ತಿಕ ಚಾಂಪಿಯನ್  ಪಡೆದುಕೊಂಡಿದ್ದಾರೆ. 7ನೇ ತರಗತಿ ವಿದ್ಯಾರ್ಥಿ ನಿಖಿಲ್ ಎತ್ತರ ಜಿಗಿತದಲ್ಲಿ ಪ್ರಥಮ,  4×100 ಮೀಟರ್ ರಿಲೆ ತಂಡ ನಿಖಿಲ್, ಸಚಿನ್ ಸಂತೋಷ್ , ವಿಕಾಸ್, ಅಕ್ಷಯ್ ಪ್ರಿನ್ಸ್ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.  ಪ್ರಾಥಮಿಕ ಬಾಲಕಿಯರ ವಿಭಾಗದಲ್ಲಿ 7ನೇ ತರಗತಿ ವಿದ್ಯಾರ್ಥೀನಿ ಜನನಿ 200 ಮೀಟರ್ ಓಟದಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.

Also Read  ಮೈಸೂರು-ಮಂಗಳೂರಿಗೆ ವಿಮಾನಯಾನ ಆರಂಭ ➤ಸಂಸದ ಪ್ರತಾಪ್ ಸಿಂಹ ರಿಂದ ಹಸಿರು ನಿಶಾನೆ

ವಯೋಮಿತಿ  14ರ 8ನೇ ತರಗತಿ ಬಾಲಕರÀ ವಿಭಾಗದಲ್ಲಿ 8ನೇ ತರಗತಿ ವಿದ್ಯಾರ್ಥಿ ಆದರ್ಶ್ ಶೆಟ್ಟಿ 600 ಮೀಟರ್, 400ಮೀಟರ್, ಓಟ ಹಾಗೂ ಎತ್ತರ ಜಿಗಿತದಲ್ಲಿ ಪ್ರಥಮ ಸ್ಥಾನ ಪಡೆದು ವೈಯುಕ್ತಿಕ  ಚಾಂಪಿಯನ್  ಪಡೆದುಕೊಂಡಿರುತ್ತಾರೆ. 4×100 ಮೀಟರ್ ರಿಲೆ ತಂಡ ಆದರ್ಶ್‍ಶೆಟ್ಟಿ , ಪ್ರಜ್ವಲ್ , ಜಿತಿನ್, ಸುಬಿನ್, ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.  8ನೇ ತರಗತಿ ಬಾಲಕಿಯರÀ ವಿಭಾಗದಲ್ಲಿ 8ನೇ ತರಗತಿ ವಿದ್ಯಾರ್ಥಿನಿ ರೋಸ್ಲಿನ ಉದ್ದ ಜಿಗಿತ ಮತ್ತು ಗುಂಡೆಸೆತದಲ್ಲಿ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.

17ರ ವಯೋಮಾನದ ಬಾಲಕಿಯರ ಪ್ರೌಢ  ವಿಬಾಗದಲ್ಲಿ 9ನೇ ತರಗತಿ ವಿದ್ಯಾರ್ಥಿನಿ ಮೇಘ ಮತ್ತಾಯಿ ಗುಂಡು ಎಸೆತದಲ್ಲಿ 30.84 ಮೀಟರ್ ಗುಂಡು ಎಸೆದು ಪ್ರಥಮ ಸ್ಥಾನ ಪಡೆದು ದಾಖಲೆ ನಿರ್ಮಿಸಿದ್ದಾರೆ . ಚಕ್ರ ಎಸೆತದಲ್ಲಿ ಪ್ರಥಮ, ಈಟಿ ಎಸೆತದಲ್ಲಿ ತೃತೀಯ ಇದೇ ತರಗತಿ ವಿದ್ಯಾರ್ಥಿನಿ ರಕ್ಷಾ ಎತ್ತರ ಜಿಗಿತದಲ್ಲಿ  ಪ್ರಥಮ 17ರ ವಯೋಮಾನದ ಪ್ರೌಢ  ಬಾಲಕರ ವಿಭಾಗದಲ್ಲಿ ಲಿಬಿನ್ 1500 ಓಟದಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ. ದೈಹಿಕ ಶಿಕ್ಷಕರಾದ ಸುದರ್ಶನ್ , ಮನೋಜ್, ಅಲ್ಪೋನ್ಸಾ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ್ದರು. ಪ್ರಾಂಶುಪಾಲರಾದ ರೆ|ಫಾ|  ಮ್ಯಾಥ್ಯೂ ಪ್ರಫುಲ್ ಒ.ಐ.ಸಿ. ವಿದ್ಯಾರ್ಥಿಗಳನ್ನು ಮತ್ತು ದೈಹಿಕ ಶಿಕ್ಷಕರನ್ನು ಅಭಿನಂದಿಸಿದರು.

Also Read  ಜೀವಂತ ಶ್ವಾನವನ್ನು ತ್ಯಾಜ್ಯ ವಾಹನಕ್ಕೆ ನೀಡಿದ ಮಾಲಕರು..!

error: Content is protected !!
Scroll to Top