ಸುಳ್ಯ: ಸ್ನಾನಕ್ಕೆಂದು ಸ್ನೇಹಿತರೊಂದಿಗೆ ನದಿಗಿಳಿದ ಬಾಲಕ ➤ ನೀರಿನಲ್ಲಿ ಮುಳುಗಿ ಮೃತ್ಯು

(ನ್ಯೂಸ್ ಕಡಬ) newskadaba.com ಸುಳ್ಯ, ಅ.13. ಸ್ನಾನಕ್ಕೆಂದು ನದಿಯ ನೀರಿಗೆ ಇಳಿದ ನಾಲ್ವರ ಪೈಕಿ ಓರ್ವ ಬಾಲಕ ನೀರಿನಲ್ಲಿ ಮುಳುಗಿ ಮೃತಪಟ್ಟ ದಾರುಣ ಘಟನೆ ಭಾನುವಾರದಂದು ಸುಳ್ಯದಲ್ಲಿ ನಡೆದಿದೆ.

ಮೃತ ಬಾಲಕನನ್ನು ಸುಳ್ಯ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿ, ದುಗಲಡ್ಕ ಬಳಿಯ ಕಮಿಲ ನಿವಾಸಿ ಹರೀಶ್ ಗೌಡ ಎಂಬವರ ಪುತ್ರ ಯಶ್ವಿತ್ ಎಂದು ಗುರುತಿಸಲಾಗಿದೆ. ಯಶ್ವಿತ್ ಭಾನುವಾರದಂದು ತನ್ನ ಮೂವರು ಸ್ನೇಹಿತರೊಂದಿಗೆ ಸ್ನಾನಕ್ಕೆಂದು ಉಬರಡ್ಕ ನದಿಗೆ ತೆರಳಿದ್ದು, ಈ ವೇಳೆ ಕಿರಣ್ ಎಂಬ ಬಾಲಕ ನೀರಲ್ಲಿ ಮುಳುಗುವುದನ್ನು ಕಂಡ ಯಶ್ವಿತ್ ಮತ್ತು ಇತರ ಇಬ್ಬರು ಸೇರಿ ಕಿರಣ್ ನನ್ನು ಮೇಲೆತ್ತಿದ್ದಾರೆ ಎನ್ನಲಾಗಿದೆ. ಆದರೆ ಯಶ್ವಿತ್ ನೀರಿನ ಆಳಕ್ಕೆ ಜಾರಿ ಬಿದ್ದು ಮೃತಪಟ್ಟನೆನ್ನಲಾಗಿದೆ. ವಿಷಯ ತಿಳಿದು ಊರವರು ಹಾಗೂ ಪೋಲೀಸರು ಸ್ಥಳಕ್ಕೆ ಭೇಟಿ ನೀಡಿದ ಬಳಿಕ ಮೃತದೇಹವನ್ನು ಮೇಲಕ್ಕೆತ್ತಲಾಗಿದ್ದು, ಈ ಬಗ್ಗೆ ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಂದ ಪ್ರೋತ್ಸಾಹ ಧನಕ್ಕೆ ಅರ್ಜಿ ಆಹ್ವಾನ

error: Content is protected !!
Scroll to Top