ಯಕ್ಷ ರಂಗದ ಯುವ ಕಲಾವಿದ ಕಡಬ ವಿನಯ ಆಚಾರ್ಯ ನಿಧನ

(ನ್ಯೂಸ್ ಕಡಬ) newskadaba.com ಕಡಬ, ಸೆ.23. ಮದ್ದಲೆಗಾರನಾಗಿ ಯಕ್ಷ ರಂಗದಲ್ಲಿ ಪ್ರಸಿದ್ಧಿಯನ್ನು ಪಡೆದು ಬಹು ಬೇಡಿಕೆಯ ಕಲಾವಿದನಾಗಿದ್ದ ಕಡಬ ವಿನಯ ಆಚಾರ್ಯ ಸೋಮವಾರದಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.

ಕಳೆದ ಕೆಲವು ದಿನಗಳಿಂದ ಅನಾರೋಗ್ಯಕ್ಕೊಳಗಾಗಿದ್ದ ಅವರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಸುಮಾರು 33 ವರ್ಷ ಪ್ರಾಯದ ವಿನಯ ಆಚಾರ್ಯ ಯಕ್ಷರಂಗದಲ್ಲಿ ಬಹು ಬೇಡಿಕೆಯ ಯುವ ಕಲಾವಿದನಾಗಿದ್ದರು. ಅವರ ತಂದೆ ಕಡಬ ನಾರಾಯಣ ಆಚಾರ್ಯರೂ ಪ್ರಸಿದ್ಧ ಮದ್ದಲೆಗಾರರಾಗಿದ್ದರು. ಭರವಸೆಯ ಮದ್ದಲೆಗಾರರಾಗಿದ್ದ ಕಡಬ ವಿನಯ ಆಚಾರ್ಯ ಹೊಸನಗರ, ಎಡನೀರು, ಹನುಮಗಿರಿ ಮೇಳದಲ್ಲಿ ತಿರುಗಾಟ ನಡೆಸಿದ್ದರು. ಪ್ರಸ್ತುತ ಅವರು ತೆಂಕುತಿಟ್ಟು ಯಕ್ಷಗಾನದಲ್ಲಿ ಮದ್ದಲೆಗಾರನಾಗಿ ಕಾರ್ಯ ನಿರ್ವಹಿಸುತ್ತಿದ್ದರು.

Also Read  ಸಾಮಾಜಿಕ ಜಾಲತಾಣದಲ್ಲಿ ಪಡೆದ ಜ್ಞಾನದಿಂದ ರಾಷ್ಟ್ರನಿರ್ಮಾಣ ಸಾಧ್ಯವಿಲ್ಲ -ಮಹಾನಗರಪಾಲಿಕೆ ಆಯುಕ್ತ ಆನಂದ್

error: Content is protected !!
Scroll to Top