ರಾಜ್ಯ ಮಟ್ಟದ ಕರಾಟೆ ➤ ಜ್ಞಾನೋದಯ ಬೆಥನಿ ವಿದ್ಯಾರ್ಥಿನಿ ರಕ್ಷಾ ಇವರಿಗೆ ಕಾಪಾದಲ್ಲಿ ಚಿನ್ನದ ಪದಕ

(ನ್ಯೂಸ್ ಕಡಬ) newskadaba.com ನೆಲ್ಯಾಡಿ,ಸಪ್ಟೆಂಬರ್.21.ಶ್ರೀರಾಮ ವಿದ್ಯಾಸಂಸ್ಥೆ ಕಲ್ಲಡ್ಕ ಹಾಗೂ ವೆಸ್ಟರ್ನ್ ಮಾರ್ಷಲ್ ಆಟ್ರ್ಸ್ ಮಂಗಳೂರು ಇಂಟರ್‍ನ್ಯಾಷನಲ್‍ನವರು ಸಂಯುಕ್ತ ಆಶ್ರಯದಲ್ಲಿ ನಡೆಸಿದ ರಾಜ್ಯ ಮಟ್ಟದ ಕರಾಟೆ  ಸ್ಪರ್ಧೆಯಲ್ಲಿ     ಜ್ಞಾನೋದಯ ಬೆಥನಿ ಪಿ ಯು ಕಾಲೇಜಿನ  ವಿದ್ಯಾರ್ಥಿನಿ ಭಾಗವಹಿಸಿದ್ದಳು.

9ನೇ ತರಗತಿ ವಿದ್ಯಾರ್ಥಿನಿ ರಕ್ಷಾ ಇವರು ಕಾಪಾದಲ್ಲಿ ಚಿನ್ನದ ಪದಕ ಹಾಗೂ ಕಮಟೆಯಲ್ಲಿ ಬೆಳ್ಳಿ ಪದಕವನ್ನು ಪಡೆದಿರುತ್ತಾರೆ. ಇವರು ಬಿಎಸ್‍ಎನ್‍ಎಲ್ ಉದ್ಯೋಗಿ ಕೊಕ್ಕಡದ ಡೀಕಯ್ಯ ಗೌಡ ಹಾಗೂ ಪುಷ್ಪಾವತಿಯವರ ಸುಪುತ್ರಿಯಾಗಿರುತ್ತಾರೆ. ಸಂಸ್ಥೆಯ ಪ್ರಾಂಶುಪಾಲರಾದ ರೆ|ಫಾ| ಮ್ಯಾಥ್ಯೂ ಪ್ರಫುಲ್ ಒಐಸಿ ಅವರು ವಿದ್ಯಾರ್ಥಿನಿ ರಕ್ಷಾ ಹಾಗೂ ದೈಹಿಕ ಶಿಕ್ಷಕಿ ಅಲ್ಫೋನ್ಸಾರವರಿಗೆ ಅಭಿನಂದನೆ ಸಲ್ಲಿಸಿದರು.

Also Read  ಬೆಥನಿ ಸಮೂಹ ಶಿಕ್ಷಣ ಸಂಸ್ಥೆ: ಕ್ರಿಸ್ಮಸ್‌ ಆಚರಣೆ, ಹಬ್ಬಗಳೆಂದರೆ ಬರೇ ಆಡಂಬರಗಳೇ ಆಗದೆ ಪ್ರೀತಿ ಸಂತೋಷಗಳನ್ನುಹಂಚುವಂತಾಗಲಿ.

error: Content is protected !!
Scroll to Top