ಸಾ. ಶಿಕ್ಷಣ ಇಲಾಖೆ ಪುತ್ತೂರು ಇದರ ವತಿಯಿಂದ14 ವಯೋಮಾನದ ಬಾಲಕರ ವಾಲಿ ಬಾಲ್ ಪಂದ್ಯಾಟ ➤ ಜ್ಞಾನೋದಯ ಬೆಥನಿ ದ್ವಿತೀಯ

(ನ್ಯೂಸ್ ಕಡಬ) newskadaba.com ನೆಲ್ಯಾಡಿ,ಸಪ್ಟೆಂಬರ್.21.ಸಾರ್ವಜನಿಕ ಶಿಕ್ಷಣ ಇಲಾಖೆ ಪುತ್ತೂರು ಇದರ ವತಿಯಿಂದ ಶ್ರೀ ರಾಮಕುಂಜೇಶ್ವರ ಪ್ರೌಢ ಶಾಲೆಯಲ್ಲಿ ನಡೆದ 14 ವಯೋಮಾನದ ಬಾಲಕರ ವಾಲಿ ಬಾಲ್ ಪಂದ್ಯಾಟ ನಡೆಸಲಾಗಿತ್ತು.

ಜ್ಞಾನೋದಯ ಬೆಥನಿ ಪಿಯು ಕಾಲೇಜಿನ ವಿದ್ಯಾರ್ಥಿಗಳಾದ ಆರೋನ್, ಸಚಿನ್, ನಹಿಝ್, ಶಾನ್, ಸಾಂಜೋ, ಜಿನ್ಮಯಿ, ನಿಖಿಲ್ ಹಾಗೂ ನೂತನ್ ಭಾಗವಹಿಸಿ ದ್ವಿತೀಯ ಸ್ಥಾನ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಇವರಿಗೆ ಶಾರೀರಿಕ ಶಿಕ್ಷಕರಾದ ಮನೋಜ್, ಸುದರ್ಶನ್ ಬಂಗೇರ ಮತ್ತು ಅಲ್ಫೋನ್ಸಾ ಮಾರ್ಗದರ್ಶನ ನೀಡಿರುತ್ತಾರೆ. ಸಂಸ್ಥೆಯ ಪ್ರಾಂಶುಪಾಲರಾದ ರೆ|ಫಾ| ಮ್ಯಾಥ್ಯೂ ಪ್ರಫುಲ್ ಒಐಸಿ ಎಲ್ಲರನ್ನೂ ಆಭಿನಂದಿಸಿದರು.

Scroll to Top