ಹೊಸಗದ್ದೆ ತೋಟಗಾರಿಕೆ ಕ್ಷೇತ್ರ ➤ ಅಡಿಕೆ ಫಸಲು ವಿಲೇವಾರಿ

(ನ್ಯೂಸ್ ಕಡಬ) newskadaba.com ಮಂಗಳೂರು,ಸಪ್ಟೆಂಬರ್.17. 2019-20ನೇ ಸಾಲಿನಲ್ಲಿ ದಕ್ಷಿಣಕನ್ನಡ ಜಿಲ್ಲೆಯ ಸುಳ್ಯ ತಾಲೂಕು ಹೊಸಗದ್ದೆ ತೋಟಗಾರಿಕೆ ಕ್ಷೇತ್ರದ ಅಡಿಕೆ ಫಸಲನ್ನು ಇ-ಹರಾಜು ಮತ್ತು ಟೆಂಡರ್ ಹರಾಜು ಮೂಲಕ ವಿಲೇವಾರಿ ಮಾಡಲಾಗುವುದು. ಇ-ಹರಾಜು ಅವಧಿಯು ಸೆಪ್ಟೆಂಬರ್ 13 ರಂದು ಪ್ರಾರಂಭವಾಗಿ ಅಕ್ಟೋಬರ್ 14 ರಂದು ಸಂಜೆ 4 ಗಂಟೆಗೆ ಕೊನೆಗೊಳ್ಳಲಿದೆ. ಆಸಕ್ತರು ತಮ್ಮ ಬಿಡ್ಡನ್ನು ಇ-ಹರಾಜು ಅಥವಾ ಟೆಂಡರ್ ಮೂಲಕ ಸಲ್ಲಿಸಬಹುದಾಗಿದೆ.

ಇ-ಹರಾಜಿನಲ್ಲಿ ಭಾಗವಹಿಸಲು ಇಚ್ಚಿಸುವವರು e.procurement.kar.in ರಲ್ಲಿ ಪಡೆಯಬಹುದಾಗಿದೆ. ಟೆಂಡರ್ ಸಂಖ್ಯೆ:KSHDA/2019-20/Auction.2311. ಟೆಂಡರ್ ಮೂಲಕ ಹರಾಜಿನಲ್ಲಿ ಭಾಗವಹಿಸಲು ಇಚ್ಚಿಸುವವರು ಟೆಂಡರ್ ಷರತ್ತುಗಳು ಹಾಗೂ ಹೆಚ್ಚಿನ ವಿವರಗಳನ್ನು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ರಾಜ್ಯವಲಯ, ಮಂಗಳೂರು ಕಚೇರಿ ಹಾಗೂ ತೋಟಗಾರಿಕೆ ಸಹಾಯಕರ ಕಚೇರಿ, ರಾಜ್ಯ ವಲಯ, ಹೊಸಗದ್ದೆ ತೋಟಗಾರಿಕೆ ಕ್ಷೇತ್ರ, ಸುಳ್ಯ ಮೊಬೈಲ್ ಸಂಖ್ಯೆ:9980546690 ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.

Also Read  ಮಂಗಳೂರು: ಕೆಲಸಕ್ಕೆಂದು ಹೋದ ಯುವತಿ ನಾಪತ್ತೆ

error: Content is protected !!
Scroll to Top